ETV Bharat / sports

ಮೊಹಮ್ಮದ್​ ಶಮಿ ಸಕ್ಸಸ್​ ಮಂತ್ರ ಬಹಿರಂಗಪಡಿಸಿದ ರೋಹಿತ್​ ಶರ್ಮಾ!

author img

By

Published : Oct 7, 2019, 12:47 PM IST

Updated : Oct 7, 2019, 3:30 PM IST

ಭಾರತದ ಗೆಲುವಿಗೆ ಕೊನೆಯ ದಿನ 9 ವಿಕೆಟ್​​ಗಳ ಅವಶ್ಯಕತೆಯಿತ್ತು. ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಅಶ್ವಿನ್​ ಹಾಗೂ ಜಡೇಜಾ ವಿಕೆಟ್​ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಹರಿಣಗಳ 5 ವಿಕೆಟ್​ ಪಡೆದು ಶಮಿ ಶಾಕ್​ ನೀಡಿದರು.

Rohit SharmA

ವಿಶಾಖಪಟ್ಟಣ​: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​​ನಲ್ಲಿ ಗೆಲ್ಲಲು ಕಾರಣರಾದ ಮೊಹಮ್ಮದ್​ ಶಮಿಯ ಸಾಧನೆಯ ಹಿಂದಿರುವ ಗುಟ್ಟನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರೋಹಿತ್​ ಶರ್ಮಾ ಬಹಿರಂಗಗೊಳಿಸಿದ್ದಾರೆ.

ಭಾರತದ ಗೆಲುವಿಗೆ ಕೊನೆಯ ದಿನ 9 ವಿಕೆಟ್​​ಗಳ ಅವಶ್ಯಕತೆಯಿತ್ತು. ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಅಶ್ವಿನ್​ ಹಾಗೂ ಜಡೇಜಾ ವಿಕೆಟ್​ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಹರಿಣಗಳ ಪಾಲಿಗೆ ಕಗ್ಗಂಟಾಗಿದ್ದು ಮಾತ್ರ ವೇಗಿ ಮೊಹಮ್ಮದ್​ ಶಮಿ. ಇವರ ಯಶಸ್ವಿಗೆ ಅವರು ಬಿರಿಯಾನಿ ಕಾರಣ ಎನ್ನುವ ಮೂಲಕ ರೋಹಿತ್​ ಶರ್ಮಾ ಪತ್ರಕರ್ತರ ಪ್ರಶ್ನೆಗೆ ಹಾಸ್ಯದ ಉತ್ತರ ನೀಡಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ವಿಕೆಟ್​ ಪಡೆಯಲು ವಿಫಲರಾಗಿದ್ದ ಶಮಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ವಿಂಗ್​ದಾಳಿಯಿಂದ ಎದುರಾಳಿಯನ್ನು ಮಣ್ಣುಮುಕ್ಕಿಸಿದ್ದರ ಸೀಕ್ರೆಟ್​ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್​ ಶರ್ಮಾ, ಶಮಿ ಫ್ರೆಶ್​ ಆಗಿದ್ದಾಗ ಏನು ಮಾಡ್ತಾರೆ ಅನ್ನೋದು ನಮಗೆಲ್ಲಾ ಗೊತ್ತಿದೆ. ಅವರಿಗೆ ಸ್ವಲ್ಪ ಬಿರಿಯಾನಿ ಒಂದಿದ್ದರೆ ಸಾಕು ಎಂದು ಎಲ್ಲರ ನಗುವಿಗೆ ಕಾರಣರಾದರು.

ಶಮಿ ತಮ್ಮ ಸ್ವಿಂಗ್​ ದಾಳಿಯ ನೆರವಿನಿಂದ ಬುವಾಮ, ಫಾಫ್​ ಡು ಪ್ಲೆಸಿಸ್​, ಡಿಕಾಕ್​ರಂತಹ ಅಪಾಯಕಾರಿ ಬ್ಯಾಟ್ಸ್​ಮನ್​ಗಳು ಹಾಗೂ ಕೊನೆಯ ಇಬ್ಬರು ಬೌಲರ್​ಗಳನ್ನು ಔಟ್​ ಮಾಡುವ ಮೂಲಕ ಅಂದುಕೊಂಡಿದ್ದ ಸಮಯಕ್ಕೂ ಮೊದಲಿಗೆ ಗೆಲುವು ತಂದುಕೊಟ್ಟರು.

Intro:Body:Conclusion:
Last Updated : Oct 7, 2019, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.