ETV Bharat / sports

ಕ್ರಿಕೆಟ್​ ಲೋಕಕ್ಕೆ ಕರ್ನಾಟಕದ ಕೊಡುಗೆ ಅಪಾರ: ರೋಹಿತ್ ಶರ್ಮಾ

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ನೋಡಲು ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದರು.

ರೋಹಿತ್ ಶರ್ಮಾ
author img

By

Published : Oct 25, 2019, 2:27 PM IST

ಹುಬ್ಬಳ್ಳಿ: ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಕ್ರಿಕ್ ಕಿಂಗ್​ಡಮ್​​ ಸಹಯೋಗದಲ್ಲಿ‌‌ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ತರಬೇತಿ ಕ್ರೀಡಾಂಗಣವನ್ನು ಭಾರತ ಕ್ರಿಕೆಟ್ ತಂಡದ 'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್ ಶರ್ಮಾ ನೆರವೇರಿಸಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಕ್ರಿಕೆಟಿಗ ರೋಹಿತ್ ಶರ್ಮಾರನ್ನು ನೋಡಲು ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

ಹುಬ್ಬಳ್ಳಿ ಮಂದಿಯ ಅಭಿಮಾನಕ್ಕೆ ಚಿರಋಣಿ: ರೋಹಿತ್ ಶರ್ಮಾ

ಕ್ರೀಡಾಂಗಣ ಉದ್ಘಾಟನೆ ಬಳಿಕ ಮಾತನಾಡಿದ ಶರ್ಮಾ, ನಾನು ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದು, ನಿಜಕ್ಕೂ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ನಾನು ಇಲ್ಲಿಗೆ ಭೇಟಿ ನೀಡುತ್ತೇನೆ ಎಂದರು.

ಇದೇ ವೇಳೆ ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಸಾಕಷ್ಟಿದೆ ಎಂದು ಹಿಟ್​ಮ್ಯಾನ್ ಕೊಂಡಾಡಿದರು.

ಹುಬ್ಬಳ್ಳಿ ಅಭಿಮಾನಿಗಳ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ ಎಂದು ಹೇಳುತ್ತಾ ಸಹೃದಯತೆಯಿಂದ ರೋಹಿತ್ ಅಭಿಮಾನಿಗಳತ್ತ ಕೈ ಬೀಸಿದರು. ಇದೇ ಸಂದರ್ಭದಲ್ಲಿ ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯಂಜಯ ಸ್ವಾಮಿಜಿ ರೋಹಿತ್ ಶರ್ಮಾ ಅವರಿಗೆ ಬಸವಣ್ಣ ಹಾಗೂ ಕಿತ್ತೂರು ಚೆನ್ನಮ್ಮ ಇರುವ ಭಾವಚಿತ್ರ ನೀಡಿ ಗೌರವಿಸಿದರು. ಬಳಿಕ ನೂರಾರು ಮಕ್ಕಳ ಜೊತೆಗೆ ಸೆಲ್ಪಿಗೆ ಅವರು ಪೋಸ್​ ನೀಡಿದರು.

Intro:HubliBody:ನೂತನ ಒಳಾಂಗಣ ತರಬೇತಿ ಕ್ರೀಡಾಂಗಣಕ್ಕೆ ಚಾಲನೆ ನೀಡಿದ ರೋಹಿತ್ ಶರ್ಮಾ

ಹುಬ್ಬಳ್ಳಿ: ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಕ್ರಿಕ್ ಕಿಂಗಡಂ ಸಹಯೋಗದಲ್ಲಿ‌‌ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ತರಬೇತಿ ಕ್ರೀಡಾಂಗಣವನ್ನು ಉದ್ಘಾಟನೆ ಅಂತರಾಷ್ಟ್ರೀಯ ಕ್ರೀಡಾಪಟು,ಭಾರತ ಕ್ರಿಕೆಟ್ ತಂಡದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರು ನೆರವೇರಿಸಿದರು.
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಕ್ರಿಕೆಟಿಗ ರೋಹಿತ್ ಶರ್ಮಾ ಅವರನ್ನು ನೋಡಲು ಸಾರ್ವಜನಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿದರು.
ಭಾರತ ಕ್ರಿಕೇಟ್ ತಂಡದ ಉಪನಾಯಕರಾಗಿರುವ ರೋಹಿತ್ ಶರ್ಮಾ ಅವರ ಭೇಟಿಯಿಂದಾಗಿ
ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆಗೆ ಮೆರಗು ಬಂದಿತು
ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ, ನಾನು ಮೊದಲ ಭಾರಿಗೆ ಹುಬ್ಬಳ್ಳಿಗೆ ಬಂದಿರುವೇ. ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಸಾಕಷ್ಟಿದೆ ಎಂದರು.
ಹುಬ್ಬಳ್ಳಿಗೆ ಬಂದಿರೋದು ಖುಷಿಯಾಗಿದೆ.
ಮತ್ತೆ ಮತ್ತೆ ಹುಬ್ಬಳ್ಳಿಗೆ ಆಗಮಿಸುತ್ತೇನೆ.
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾ ಚಿರಋಣಿ ಎಂದು ಸಹೃದಯತೆಯಿಂದ ಅಭಿಮಾನಿಗಳತ್ತ ಕೈ ಬಿಸಿದರು.ಇದೇ ಸಂದರ್ಭದಲ್ಲಿ ಕೂಡಲಸಂಗಮ' ಶ್ರೀ ಬಸವ ಜಯ ಮೃತ್ಯಂಜಯ ಸ್ವಾಮಿಜಿ ರೋಹಿತ್ ಶರ್ಮಾ ಅವರಿಗೆ ಬಸವಣ್ಣನ ಹಾಗೂ ಕಿತ್ತೂರು ಚೆನ್ನಮ್ಮವಿರುವ ಭಾವಚಿತ್ರ ನೀಡಿ ಗೌರವಿಸಿದರು. ಮತ್ತು ನೂರಾರು ಮಕ್ಕಳ ಜೊತೆಗೆ ಸೆಲ್ಪಿಗೆ ಪೋಸ್ ನೀಡಿದ್ರು...!

ಬೈಟ್:- ರೋಹಿತ್ ಶರ್ಮಾ ! ಭಾರತ ಕ್ರಿಕೆಟ್ ತಂಡದ ಉಪನಾಯಕ.

_____________________________

ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ ಕುಂದಗೋಳConclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.