ಬೆಂಗಳೂರು: ಭಾರತ ತಂಡದ ಹಿಟ್ಮ್ಯಾನ್ ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 98ನೇ ಪಂದ್ಯವಾಡುವ ಮೂಲಕ ಮಾಜಿ ನಾಯಕ ಎಂ ಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಅಫ್ರಿಕಾ ವಿರುದ್ಧ ರೋಹಿತ್ ಶರ್ಮಾ ವೃತ್ತಿ ಜೀವನದ 98 ಟಿ20 ಪಂದ್ಯವಾಡಿದರು. ಈ ಮೂಲಕ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ದಾಖಲೆಯನ್ನು ಸರಿಗಟ್ಟಿ ಅತಿ ಹೆಚ್ಚು ಟಿ20 ಪಂದ್ಯವಾಡಿದ ಭಾರತೀಯ ಎಂಬ ದಾಖಲೆಯನ್ನು ಧೋನಿ ಜೊತೆ ಹಂಚಿಕೊಂಡರು. ಪಾಕಿಸ್ತಾನದ ಶೋಯಬ್ ಮಲ್ಲಿಕ್, ಶಾಹಿದ್ ಅಫ್ರಿದಿ ನಂತರದ ಸ್ಥಾನ ಪಡೆದರು. ಶೋಯಬ್ ಮಲಿಕ್ 111 ಹಾಗೂ ಅಫ್ರಿದಿ 99 ಟಿ20 ಪಂದ್ಯಗಳನ್ನಾಡಿ ಮೊದಲೆರಡು ಸ್ಥಾನದಲ್ಲಿದ್ದಾರೆ.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದ ರೋಹಿತ್ ಶರ್ಮಾ 12 ವರ್ಷಗಳಿಂದ 98 ಟಿ20 ಪಂದ್ಯಗಳನ್ನಾಡಿದ್ದು, 2443 ರನ್ ಗಳಿಸಿದ್ದಾರೆ. ಇದರಲ್ಲಿ ವಿಶ್ವದಾಖಲೆಯ ನಾಲ್ಕು ಶತಕ ಹಾಗೂ 17 ಅರ್ಧ ಶತಕಗಳು ಸೇರಿವೆ. ಇಷ್ಟೇ ಅಲ್ಲದೆ ಚುಟುಕು ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್(109) ಸಿಡಿಸಿದ ವಿಶ್ವದಾಖಲೆಯೂ ರೋಹಿತ್ ಹೆಸರಿನಲ್ಲಿಯೇ ಇದೆ.
ಇನ್ನು, ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 2443 ರನ್ ಗಳಿಸಿ ಕೇವಲ 7 ರನ್ಗಳಿಂದ ವಿರಾಟ್ ಕೊಹ್ಲಿಯಿಂದ ಅಂತರ ಕಾಯ್ದುಕೊಂಡು 2ನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಸರಣಿಯಲ್ಲಿ ರೋಹಿತ್ ಶರ್ಮಾ ಎರಡು ಪಂದ್ಯಗಳಿಂದ 21 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.