ರಾಂಚಿ: ನಿಗದಿತ ಓವರ್ಗಳ ಕ್ರಿಕೆಟ್ನಲ್ಲಿ ಅಬ್ಬರಿಸಿ ಬೊಬ್ಬರಿಯುವ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸದ್ಯ ಟೆಸ್ಟ್ ಪಂದ್ಯದಲ್ಲೂ ದಾಖಲೆಗಳ ಸರಮಾಲೆ ಕಟ್ಟುತ್ತಿದ್ದಾರೆ. ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ, ಒಂದೇ ಸರಣಿಯಲ್ಲಿ ಮೂರು ಭರ್ಜರಿ ಶತಕ ಸಿಡಿಸಿರುವ ರೋಹಿತ್ ಶರ್ಮಾ, ಇದರ ಜತೆಗೆ ಟೆಸ್ಟ್ ಕ್ರಿಕೆಟ್ ಸರಣಿವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.
-
🤘🤙#INDvSA pic.twitter.com/Q82AawwQOQ
— BCCI (@BCCI) October 19, 2019 " class="align-text-top noRightClick twitterSection" data="
">🤘🤙#INDvSA pic.twitter.com/Q82AawwQOQ
— BCCI (@BCCI) October 19, 2019🤘🤙#INDvSA pic.twitter.com/Q82AawwQOQ
— BCCI (@BCCI) October 19, 2019
ದಕ್ಷಿಣ ಆಫ್ರಿಕಾದ ಡೇನ್ ಪಿಟ್ ಎಸೆತದಲ್ಲಿ ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮಾ ಟೆಸ್ಟ್ ಸರಣಿವೊಂದರಲ್ಲಿ ಅತಿ ಹೆಚ್ಚು 17 ಸಿಕ್ಸರ್ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ಮನ್ 2018ರಲ್ಲಿ ಬಾಂಗ್ಲಾ ವಿರುದ್ಧ ಸಿಡಿಸಿದ್ದ 15 ಸಿಕ್ಸರ್ ದಾಖಲೆ ಬ್ರೇಕ್ ಮಾಡಿದ್ದಾರೆ. ಜತೆಗೆ ಭಾರತದ ಆಲ್ರೌಂಡರ್ 2010ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸಿಡಿಸಿದ್ದ 14 ಸಿಕ್ಸರ್ ದಾಖಲೆ ಕೂಡ ಉಡೀಸ್ ಆಗಿದೆ.