ಮುಂಬೈ: ಭಾರತ ತಂಡದ ವೇಗಿ ಶ್ರೀಶಾಂತ್ ತಮ್ಮ ನೆಚ್ಚಿನ ಟೀಂ ಇಂಡಿಯಾ ಇಲೆವೆನ್ ತಂಡವನ್ನು ಘೋಷಣೆ ಮಾಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಟಿ20 ನಾಯಕನನ್ನಾಗಿಯೂ, ಕೊಹ್ಲಿಯನ್ನು ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನನ್ನಾಗಿ ಅವರು ಆಯ್ಕೆ ಮಾಡಿದ್ದಾರೆ.
2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕ್ ಗೆದ್ದ ಭಾರತ ತಂಡದ ಆಟಗಾರನಾಗಿರುವ ಶ್ರೀಶಾಂತ್ 2013ರ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ 7 ವರ್ಷ ನಿಷೇಧಕ್ಕೊಳಗಾಗಿದ್ದರು. ಇದೀಗ ಸೆಪ್ಟೆಂಬರ್ 13 ಕ್ಕೆ ಅವರ ನಿಷೇಧದ ಅವಧಿ ಪೂರ್ಣಗೊಳ್ಳಲಿದ್ದು, ಮತ್ತೆ ಕ್ರಿಕೆಟ್ಗೆ ಮರಳುವ ಹಂಬಲದಲ್ಲಿದ್ದಾರೆ. ಈಗಾಗಲೇ ರಣಜಿ ತಂಡದಲ್ಲಿ ಅವಕಾಶ ಪಡೆದಿರುವ ಅವರು ಐಪಿಎಲ್ನಲ್ಲೂ ಆಡಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀಶಾಂತ್ ಆಯ್ಕೆ ಮಾಡಿದ ಭಾರತ ತಂಡ:
ರೋಹಿತ್ ಶರ್ಮಾ (ಟಿ20 ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ (ಏಕದಿನ ಹಾಗೂ ಟೆಸ್ಟ್ ನಾಯಕ), ಸುರೇಶ್ ರೈನಾ, ಕೆ.ಎಲ್. ರಾಹುಲ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗು ಎಸ್. ಶ್ರೀಶಾಂತ್