ಅಹ್ಮದಾಬಾದ್: ಭಾರತ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 9000 ರನ್ ಪೂರೈಸಿದ ಭಾರತದ 2ನೇ ಹಾಗೂ ವಿಶ್ವದ 9ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದ ವೇಳೆ 11 ರನ್ಗಳಿಸುತ್ತಿದ್ದಂತೆ ರೋಹಿತ್ ಈ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ನಲ್ಲಿ 342 ಪಂದ್ಯಗಳಲ್ಲಿ 9003 ರನ್ ರನ್ಗಳಸಿದ್ದಾರೆ. ಇದರಲ್ಲಿ 63 ಅರ್ಧಶತಕ ಮತ್ತು 6 ಶತಕಗಳು ಸೇರಿವೆ.
ರೋಹಿತ್ಗೂ ಮೊದಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ದಾಖಲೆಗೆ ಪಾತ್ರರಾಗಿದ್ದಾರೆ. ಕೊಹ್ಲಿ 303 ಪಂದ್ಯಗಳಲ್ಲಿ 5 ಶತಕ, 70 ಅರ್ಧಶತಕಗಳ ಸಹಿತ 9651 ರನ್ಗಳಿಸಿ ಟಿ20 ಕ್ರಿಕೆಟ್ನಲ್ಲಿ ಹೆಚ್ಚುರನ್ಗಳಿಸಿದ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್ಗೇಲ್ 13,720ರನ್ಗಳಸಿ ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಕೀರನ್ ಪೊಲಾರ್ಡ್(10,629), 3ನೇ ಸ್ಥಾನದಲ್ಲಿ ಶೋಯಬ್ ಮಲಿಕ್(10,488), 5ನೇ ಸ್ಥಾನದಲ್ಲಿ ಬ್ರೆಂಡನ್ ಮೆಕಲಮ್(9,922) 6ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್(9,824), 7ನೇ ಸ್ಥಾನದಲ್ಲಿ ಆ್ಯರೋನ್ ಫಿಂಚ್(9718) ಇದ್ದಾರೆ.
ಇದನ್ನು ಓದಿ:ಮಿಂಚಿದ ಶಾರ್ದುಲ್, ಪ್ರಜ್ವಲಿಸಿದ ಸೂರ್ಯ: ಭಾರತಕ್ಕೆ 8ರನ್ಗಳ ಜಯ, ಸರಣಿ 2-2ರಲ್ಲಿ ಸಮಬಲ