ರಾಯಪುರ : ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ ಕೇವಲ 18.5 ಓವರ್‌ಗಳಲ್ಲಿ 89 ರನ್‌ಗಳಿಗೆ ಅಲೌಟ್ ಆಯಿತು. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಪರ ಆಂಡ್ರ್ಯೂ ಪುಟ್ಟಿಕ್ 39 ರನ್ ಬಿಟ್ಟರೆ ಯಾವೊಬ್ಬ ಆಟಗಾರರು ಎರಡಂಕಿ ಮೊತ್ತ ದಾಟಲಿಲ್ಲ. ಆಂಡ್ರ್ಯೂ ಪುಟ್ಟಿಕ್ 46 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 39 ರನ್ಗಳಿಸಿದರು. ಶ್ರೀಲಂಕಾ ಲೆಜೆಂಡ್ಸ್ ಪರ ರಂಗನಾ ಹೆರಾತ್, ನುವಾನ್ ಕುಲಶೇಖರ ಮತ್ತು ಸನತ್ ಜಯಸೂರ್ಯ ತಲಾ ಎರಡು ವಿಕೆಟ್ ಪಡೆದರು.
ಇನ್ನೂ ಈ ಸುಲಭ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್ ಕೇವಲ 13.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡ ಸುಲಭ ಜಯ ಸಾಧಿಸಿತು. ಶ್ರೀಲಂಕಾ ಲೆಜೆಂಡ್ಸ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ತಿಲಕರತ್ನೆ ದಿಲ್ಷಾನ್ 40 ಎಸತಗಳಲ್ಲಿ 7 ಬೌಂಡರಿ ಸಮೇತ 50 ರನ್ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಉಪುಲ್ ತರಂಗಾ 31 ಎಸತಗಳಲ್ಲಿ 5 ಬೌಂಡರಿ ನೆರವಿನಿಂದ 27 ರನ್ಗಳಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಓದಿ : ಧವನ್ಗಿಂತಲೂ ರಾಹುಲ್ ಟಿ20ಯಲ್ಲಿ ರೋಹಿತ್ಗೆ ಉತ್ತಮ ಜೋಡಿ: ವಿವಿಎಸ್ ಲಕ್ಷ್ಮಣ್
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ಲೆಜೆಂಡ್ಸ್ 89 (ಪುಟ್ಟಿಕ್ 39; ಕುಲಶೇಖರ 2/13, ಹೆರಾತ್ 2/11, ಜಯಸೂರ್ಯ 2/25), ಶ್ರೀಲಂಕಾ ಲೆಜೆಂಡ್ಸ್ 92/1 (ದಿಲ್ಷಾನ್ 50 *, ತರಂಗಾ 27 *).