ನವದೆಹಲಿ: ಡೆಲ್ಲಿ ಕ್ಯಾಪಿಟಲ್ ಹಾಗೂ ಕೋಲ್ಕತ್ತಾ ನಡುವೆ ನಡೆದ ಪಂದ್ಯದ ವೇಳೆ ರಿಷಭ್ ಪಂತ್ ಹೇಳಿದ್ದ ಮಾತೊಂದು ವಿವಾದಕ್ಕೆ ಕಾರಣವಾಗಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇದೀಗ ಸ್ಪಷ್ಟನೆ ನೀಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ವಿಕೆಟ್ ಕೀಪರ್ ರಿಷಭ್, 'ಈ ಎಸೆತ ಖಂಡಿತವಾಗಿ ಬೌಂಡರಿ ಗೆರೆ ದಾಟುತ್ತದೆ' ಎಂಬ ಹೇಳಿಕೆ ನೀಡಿದ್ದರು. ಅದು ಸ್ಟಂಪ್ ಮೈಕ್ನಲ್ಲಿ ದಾಖಲಾಗಿತ್ತು. ಇನ್ನೂ ವಿಚಿತ್ರವೆಂದರೆ ಆ ಎಸೆತವನ್ನ ಉತ್ತಪ್ಪ ಬೌಂಡರಿ ಸಿಡಿಸಿದ್ದರು.
is this a #joke or cannot believe this. #matchfixing to the highest order. when will @iplt20 @bcci.tv @icc @bcci.cricket ever wake up. #shameful 😢💔💔💔💔💔 that all officials really dont care pic.twitter.com/kjBdHhvD3s
— Lalit Kumar Modi (@LalitKModi) April 1, 2019 " class="align-text-top noRightClick twitterSection" data="
">is this a #joke or cannot believe this. #matchfixing to the highest order. when will @iplt20 @bcci.tv @icc @bcci.cricket ever wake up. #shameful 😢💔💔💔💔💔 that all officials really dont care pic.twitter.com/kjBdHhvD3s
— Lalit Kumar Modi (@LalitKModi) April 1, 2019is this a #joke or cannot believe this. #matchfixing to the highest order. when will @iplt20 @bcci.tv @icc @bcci.cricket ever wake up. #shameful 😢💔💔💔💔💔 that all officials really dont care pic.twitter.com/kjBdHhvD3s
— Lalit Kumar Modi (@LalitKModi) April 1, 2019
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಐಪಿಎಲ್ನ ಮಾಜಿ ಚೇರ್ಮನ್ ಲಲಿತ್ ಮೋದಿ ಸೇರಿದಂತೆ ಅನೇಕರು ಪಂದ್ಯ ಫಿಕ್ಸ್ ಆಗಿತ್ತು ಎಂದು ಆರೋಪಿಸಿದ್ದರು. ಬ್ಯಾಟ್ಸ್ಮನ್ ಬ್ಯಾಟ್ ಬೀಸುವುದಕ್ಕೂ ಮುನ್ನ ರಿಷಭ್ ಈ ರೀತಿ ಹೇಳಲು ಹೇಗೆ ಸಾಧ್ಯ? ಖಂಡಿತವಾಗಿ ರಿಷಭ್ ಪಂತ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇದೀಗ ಬಿಸಿಸಿಐ ಇದಕ್ಕೆ ಸ್ಪಷ್ಟನೆ ನೀಡಿದೆ. ರಿಷಭ್ ಹೇಳಿರುವ ಮಾತು ತಪ್ಪಾಗಿ ಅರ್ಥೈಸಲಾಗಿದೆ. ಮೈದಾನದಲ್ಲಿ ಅವರು ಏನೆಲ್ಲ ಮಾತನಾಡಿದ್ದಾರೆ ಎಂಬುದನ್ನ ಪ್ರಸಾರ ಮಾಡದೇ ಈ ವಾಯ್ಸ್ ಮಾತ್ರ ಶೇರ್ ಮಾಡಲಾಗಿದೆ ಎಂದಿದೆ. ಅವರು ಮಾತನಾಡಿರುವ ಸಂಪೂರ್ಣ ವಾಯ್ಸ್ ಕೇಳಿ ನಿಮಗೆ ಅರ್ಥವಾಗುತ್ತದೆ ಎಂದು ಸ್ಪಷ್ಟನೆ ನೀಡಿದೆ.