ಸಿಡ್ನಿ: ಪೇಸ್ ಬೌಲರ್ ಕೇನ್ ರಿಚರ್ಡ್ಸನ್ ತಮ್ಮ ಮಗನೊಂದಿಗೆ ಸಮಯ ಕಳೆಯಲು ಭಾರತ ವಿರುದ್ಧದ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ ಮತ್ತು ಆಂಡ್ರ್ಯೂ ಟೈ ಅವರ ಸ್ಥಾನದಲ್ಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ತಿಳಿಸಿದೆ.
ರಿಚರ್ಡ್ ಸನ್ ತನ್ನ ಪತ್ನಿ ಮತ್ತು ಇತ್ತೀಚೆಗೆ ಜನಿಸಿದ ಮಗುವಿಗೆ ಸಮಯ ನೀಡಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ. ಆಸ್ಟ್ರೇಲಿಯಾ ಕ್ರಿಕೆಟ್ ಕೂಡ ರಿಚರ್ಡ್ಸನ್ ಅವರ ನಿರ್ಧಾರ ಗೌರವಿಸಿದ್ದು, ಅವರ ಬದಲಿಗೆ ತಂಡದಲ್ಲಿ ವೇಗದ ಬೌಲರ್ ಆಂಡ್ರ್ಯೂ ಟೈ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಸೆಲೆಕ್ಟರ್ ಟ್ರೆವರ್ ಹೊನ್ಸ್, "ಇದು ಕೇನ್ ಅವರ ಕಠಿಣ ನಿರ್ಧಾರವಾಗಿತ್ತು. ಆದರೆ, ಇದಕ್ಕೆ ನಮ್ಮ ತಂಡವು ಸಂಪೂರ್ಣ ಬೆಂಬಲ ನೀಡಿದೆ. ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಕಾಲ ಕಳೆಯಲು ಬಯಸಿದ್ದಾರೆ. ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಯಾವಾಗಲೂ ನಮ್ಮ ತಂಡ ಮತ್ತು ಆಟಗಾರರೊಂದಿಗೆ ನಿಲ್ಲುತ್ತೇವೆ ಮತ್ತು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದಿದ್ದಾರೆ.
ಆಂಡ್ರ್ಯೂ ಟೈ ಇದುವರೆಗೆ ಏಳು ಏಕದಿನ ಮತ್ತು 26 ಟಿ -20 ಪಂದ್ಯಗಳನ್ನು ಆಡಿದ್ದಾರೆ.