ಅಬುಧಾಬಿ: ರಾಹುಲ್ ತ್ರಿಪಾಠಿ ಅವರ ಆಕರ್ಷಕ ಅರ್ಧಶತಕ(81)ದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಿಎಸ್ಕೆ ವಿರುದ್ಧ 167 ರನ್ಗಳಿಸಿದೆ.
ಟಾಸ್ಗೆದ್ದ ಕೆಕೆಆರ್ ತಂಡದ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ತ್ರಿಪಾಠಿ ಇಂದಿನ ಪಂದ್ಯದಲ್ಲಿ ನರೈನ್ ಬದಲಾಗಿ ಆರಂಭಿಕನಾಗಿ ಕಣಕ್ಕಿಳಿದು ಆಕರ್ಷಕ ಅರ್ಧಶತಕ ಸಿಡಿಸಿದರು. ಅವರು ಗಿಲ್ ಜೊತೆಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 37 ರನ್ ಕಲೆಯಾಕಿದರು. ಗಿಲ್ ಕೇವಲ 11 ರನ್ಗಳಿಸಿ ಠಾಕೂರ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದಂತಹ ಯಾವ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ಹೆಚ್ಚು ನೆಲೆಯೂರಲು ಸಿಎಸ್ಕೆ ಬೌಲರ್ಗಳು ಅವಕಾಶ ನೀಡಲಿಲ್ಲ. ಗಿಲ್ ನಂತರ ಬಂದ ನಿತೀಶ್ ರಾಣಾ 9, ನರೈನ್ 17, ಮಾರ್ಗನ್ 7, ರಸೆಲ್ 2 ಹಾಗೂ ಕಾರ್ತಿಕ್ ಕೇವಲ 12 , ಶಿವಮ್ ಮಾವಿ ಹಾಗೂ ನಾಗರಕೋಟಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಪ್ಯಾಟ್ ಕಮ್ಮಿನ್ಸ್ 9 ಎಸೆತಗಳಲ್ಲಿ 17 ರನ್ಗಳಿಸಿ ಔಟಾಗದೆ ಉಳಿದರು.
-
Innings Break!
— IndianPremierLeague (@IPL) October 7, 2020 " class="align-text-top noRightClick twitterSection" data="
Three wickets from Bravo and two wickets apiece from Curran, Karn Sharma and Shardul Thakur as #KKR are all out for 167.
Live - https://t.co/t7AbaZK1gI #Dream11IPL pic.twitter.com/njgUvN4qd6
">Innings Break!
— IndianPremierLeague (@IPL) October 7, 2020
Three wickets from Bravo and two wickets apiece from Curran, Karn Sharma and Shardul Thakur as #KKR are all out for 167.
Live - https://t.co/t7AbaZK1gI #Dream11IPL pic.twitter.com/njgUvN4qd6Innings Break!
— IndianPremierLeague (@IPL) October 7, 2020
Three wickets from Bravo and two wickets apiece from Curran, Karn Sharma and Shardul Thakur as #KKR are all out for 167.
Live - https://t.co/t7AbaZK1gI #Dream11IPL pic.twitter.com/njgUvN4qd6
ಆರಂಭಿಕನಾಗಿ ಕಣಕ್ಕಿಳಿದು 18ನೇ ಓವರ್ವರೆಗೆ ಬ್ಯಾಟಿಂಗ್ ಮಾಡಿದ ತ್ರಿಪಾಠಿ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 81 ರನ್ಗಳಿಸಿ ಡಿಜೆ ಬ್ರಾವೋಗೆ ವಿಕೆಟ್ ಒಪ್ಪಿಸಿದರು.
ಸಿಎಸ್ಕೆ ಪರ ಡಿಜೆ ಬ್ರಾವೋ 37ಕ್ಕೆ3, ಕರ್ನ್ ಶರ್ಮಾ 25ಕ್ಕೆ 2, ಶಾರ್ದುಲ್ ಠಾಕೂರ್ 28ಕ್ಕೆ 2 ಹಾಗೂ ಸ್ಯಾಮ್ ಕರ್ರನ್ 26ಕ್ಕೆ 2 ವಿಕೆಟ್ ಪಡೆದು ಮಿಂಚಿದರು.