ಲಾಹೋರ್: ಕೋವಿಡ್ 19 ಭೀತಿಯಿಂದ ಅರ್ಧಕ್ಕೆ ನಿಂತಿರುವ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಪಾಕಿಸ್ತಾನದಲ್ಲೇ ಮುಂದುವರಿಸುವುದಾಗಿ ಪಿಸಿಬಿ ಘೋಷಣೆ ಮಾಡಿದೆ.
ಮಾರ್ಚ್ನಲ್ಲಿ ಟೂರ್ನಿ ನಡೆಯುತ್ತಿದ್ದಾಗಲೇ ಕೊರೊನಾ ಒಕ್ಕರಿಸಿದ್ದರಿಂದ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಇದೀಗ ಮುಚ್ಚಿ ಕ್ರೀಡಾಂಗಣದಲ್ಲಿ ನಡೆಸಬೇಕೆಂದುಕೊಂಡಿರುವ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಬೇಕೆಂದು ಪ್ರಾಂಚೈಸಿ ಮಾಲಿಕರು ಪಿಸಿಬಿಗೆ ಮನವಿ ಮಾಡಿಕೊಂಡಿದ್ದವು.
ಆದರೆ ಪ್ರಾಂಚೈಸಿಗಳ ಮನವಿಯನ್ನು ತಿರಸ್ಕರಿಸುವ ಪಾಕಿಸ್ತಾನ ಬೋರ್ಡ್ ಉಳಿದಿರುವ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. 5 ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಲೀಗ್ಅನ್ನು ಇಲ್ಲೇ ಮುಗಿಸಬೇಕೆಂದು ತಿಳಿಸಿದೆ. ಇತ್ತೀಚಿನ ಸಭೆಯಲ್ಲಿ ಮುಂದಿನ ನವೆಂಬರ್- ಡಿಸೆಂಬರ್ನಲ್ಲಿ ಪಿಎಸ್ಎಲ್ ಪೂರ್ಣಗೊಳಿಸಲಿ ತೀರ್ಮಾನಿಸಲಾಗಿದೆ.
ಕೊರೊನ ವೈರಸ್ ಸಾಂಕ್ರಾಮಿಕ ರೋಗವು ಮುಂದುವರಿದರೆ, ಟ್ರೋಫಿಯನ್ನು ಹಸ್ತಾಂತರಿಸಲು ಮತ್ತು ಬಹುಮಾನದ ಹಣವನ್ನು ವಿತರಿಸಲು ಕೆಲವು ಸೂತ್ರವನ್ನು ರಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಪಿಸಿಬಿ ಖಾಲಿ ಸ್ಟೇಡಿಯಂನಲ್ಲಿ ಮುಂದಿನ ಪಂದ್ಯಗಳನ್ನು ಆಯೋಜಹಿಸಿರುವುದರಿಂದ ಮುಂಗಡ ಟಿಕೆಟ್ ಕಾಯ್ದಿರಿಸಿದ್ದವರಿಗೆ ಮರುಪಾವತಿಸುವ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ.