ಸಿಡ್ನಿ: ಭಾರತದ ವಿರುದ್ಧ ಮುಂಬರುವ 4 ಪಂದ್ಯಗಳ ಟೆಸ್ಟ್ ಸರಣಿಗೆ ತಾನು ಸಿದ್ಧನಿದ್ಧೇನೆ ಎಂದು ಆಸ್ಟ್ರೇಲಿಯಾ ತಂಡ ಸೇರಿರುವ ಅಂತಾರಾಷ್ಟ್ರೀಯ ಅನುಭವವಿಲ್ಲದ ವಿಲ್ ಪುಕೋವ್ಸ್ಕಿ ತಿಳಿಸಿದ್ದಾರೆ.
ಡಿಸೆಂಬರ್ 17ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿರುವ ಬಾರ್ಡರ್ -ಗವಾಸ್ಕರ್ ಟ್ರೋಫಿ ಸರಣಿಗೆ ಆಸ್ಟ್ರೇಲಿಯಾ ತಂಡ ಘೋಷಿಸಿರುವ 17 ಸದಸ್ಯರ ತಂಡದಲ್ಲಿ 5 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಆಟಗಾರರಿದ್ದಾರೆ. ಅದರಲ್ಲಿ ಒಬ್ಬರಾಗಿರುವ ಪುಕೋವ್ಸ್ಕಿ ಭಾರತ ತಂಡದ ವಿರುದ್ಧ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಅವರು ಇತ್ತೀಚೆಗೆ ಮುಗಿದ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಈತ ಬ್ಯಾಕ್ ಟು ಬ್ಯಾಟು ದ್ವಿಶತಕ ಸಿಡಿಸಿದ್ದರು.
ಇದೊಂದು ಬಹುದೊಡ್ಡದಾದ ಪಯಣವಾಗಿದೆ, ಆದರೆ ನಾನು ಈ ಸವಾಲನ್ನು ಎದುರಿಸಲು ಸರಿಯಾದ ಸ್ಥಾನದಲ್ಲಿದ್ದೇನೆ ಎಂದು ಭಾವಿಸುವುದಿಲ್ಲ. ಆದರೆ ನಾನು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಭಾರತದ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.
ನಾನು ಈ ಸವಾಲನ್ನು ಸ್ವೀಕರಿಸಲು ಉತ್ಸುಕನಾಗಿದ್ದೇನೆ. 2 ವರ್ಷದ ಕೆಳಗೆ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತ್ತಾದರೂ, ಆಗ ನನಗೆ 21 ವರ್ಷ ವಯಸ್ಸಾಗಿತ್ತು. ಆದರೆ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಆ ಸರಣಿಯಿಂದ ಹೊರಬಂದಿದ್ದೆ. ಆದರೆ ಪ್ರಸ್ತುತ ನಾನು ಆಸ್ಟ್ರೇಲಿಯಾಕ್ಕಾಗಿ ಆಡಬೇಕೆಂಬ ಗುರಿಯನ್ನು ತಲುಪಲು ಬೆಟ್ಟದಷ್ಟು ಶ್ರಮಪಟ್ಟಿದ್ದೇನೆ, ಹಾಗಾಗಿ ಅವಕಾಶ ಒದಗಿ ಬಂದರೆ ಖಂಡಿತ ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ನಾನು ಅವಕಾಶಗಳನ್ನು ಬಳಸಿಕೊಳ್ಳಲು ಈಗ ಉತ್ತಮ ಸ್ಥಾನದಲ್ಲಿದ್ದೇನೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಜೊತೆಗೆ ತಂಡದ ಯಾವುದೇ ಕ್ರಮಾಂಕದಲ್ಲಿ ಆಡಲು ನಾನು ಫಿಟ್ ಇದ್ದೇನೆ ಎಂದಿದ್ದಾರೆ.