ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಟೀಂ ಇಂಡಿಯಾ ಆಟಗಾರ ಅಂಬಾಟಿ ರಾಯುಡು ಆರೋಪಿಸಿದ್ದು, ಪರಿಶೀಲನೆ ನಡೆಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಯುಡು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಹೀಗಿರುವಾಗ ಹೈದರಾಬಾದ್ ತಂಡ ಹೇಗೆ ಬೆಳವಣಿಗೆ ಕಾಣಲು ಸಾಧ್ಯ. ಕ್ರಿಕೆಟ್ ಅಸೋಸೊಯೇಷನ್ನಲ್ಲಿರುವ ಹಲವರ ಮೇಲೆ ಎಸಿಬಿ ಕೇಸುಗಳಿವೆ. ದಯವಿಟ್ಟು ಇದರ ಬಗ್ಗೆ ಪರಿಶೀಲನೆ ನಡೆಸಿ ಎಂದು ತೆಲಂಗಾಣದ ಕೈಗಾರಿಕೆ ಮತ್ತು ಪುರಸಭೆ ಆಡಳಿತ ಸಚಿವ ಕೆ ಟಿ ರಾಮರಾವ್ ಅವರಿಗೆ ಮನವಿ ಮಾಡಿದ್ದಾರೆ.
-
Hello sir @KTRTRS, I request u to plz look into nd address the rampant corruption prevailing in hca. Hw can hyderabad be great when it's cricket team is influenced by money nd corrupt ppl who hav numerous acb cases against them which are being swept under the carpet.
— Ambati Rayudu (@RayuduAmbati) November 23, 2019 " class="align-text-top noRightClick twitterSection" data="
">Hello sir @KTRTRS, I request u to plz look into nd address the rampant corruption prevailing in hca. Hw can hyderabad be great when it's cricket team is influenced by money nd corrupt ppl who hav numerous acb cases against them which are being swept under the carpet.
— Ambati Rayudu (@RayuduAmbati) November 23, 2019Hello sir @KTRTRS, I request u to plz look into nd address the rampant corruption prevailing in hca. Hw can hyderabad be great when it's cricket team is influenced by money nd corrupt ppl who hav numerous acb cases against them which are being swept under the carpet.
— Ambati Rayudu (@RayuduAmbati) November 23, 2019
ಇದೇ ವರ್ಷದಲ್ಲಿ ಟೀಂ ಇಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶ್ವಕಪ್ ಟೂರ್ನಿಗೆ ಆಯ್ಕೆಮಾಡದಿದ್ದಕ್ಕೆ ಬೇಸರಗೊಂಡಿದ್ದ ಅಂಬಾಟಿ ರಾಯುಡು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ, ಕಳೆದ ಕೆಲ ತಿಂಗಳ ಹಿಂದೆಯಷ್ಟೆ ತಮ್ಮ ನಿರ್ಧಾರವನ್ನ ಬದಲಿಸಿ ಕ್ರಿಕೆಟ್ಗೆ ವಾಪಸ್ ಆಗಿದ್ದು, ಇದೀಗ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಗುಡುಗಿದ್ದಾರೆ.