ಮೆಲ್ಬೋರ್ನ್: ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಆಡುವ ಮೂಲಕ ಭಾರತದ ಮೂರು ಮಾದರಿಯ ಕ್ರಿಕೆಟ್ನಲ್ಲಿ 50 ಪಂದ್ಯಗಳನ್ನಾಡಿದ ಮೂರನೇ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
2009 ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರವೀಂದ್ರ ಜಡೇಜಾ ಕಳೆದ 11 ವರ್ಷಗಳಲ್ಲಿ ಭಾರತ ತಂಡ 50 ಟೆಸ್ಟ್ 168 ಏಕದಿನ ಹಾಗೂ 50 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತ ತಂಡಕ್ಕೆ ಆಪತ್ಪಾಂಧವನಾಗಿರುವ ಅವರು ಟೆಸ್ಟ್ನಲ್ಲಿ 1926 ರನ್ ಹಾಗೂ 216 ವಿಕೆಟ್, ಏಕದಿನ ಕ್ರಿಕೆಟ್ನಲ್ಲಿ 2,411 ರನ್ ಹಾಗೂ 188 ವಿಕೆಟ್ ಮತ್ತು ಟಿ-20 ಕ್ರಿಕೆಟ್ನಲ್ಲಿ 217 ರನ್ ಹಾಗೂ 39 ವಿಕೆಟ್ ಪಡೆದಿದ್ದಾರೆ.
-
It's a great honour to join Mahi Bhai and Virat as the only others to have played 50 games across all 3 formats for 🇮🇳 A big thank you to the BCCI, my team mates, the brilliant support staff for showing faith in me and for always backing me.Onwards and upwards. Jai Hind 🙏 pic.twitter.com/9tH5R5o5Ma
— Ravindrasinh jadeja (@imjadeja) December 29, 2020 " class="align-text-top noRightClick twitterSection" data="
">It's a great honour to join Mahi Bhai and Virat as the only others to have played 50 games across all 3 formats for 🇮🇳 A big thank you to the BCCI, my team mates, the brilliant support staff for showing faith in me and for always backing me.Onwards and upwards. Jai Hind 🙏 pic.twitter.com/9tH5R5o5Ma
— Ravindrasinh jadeja (@imjadeja) December 29, 2020It's a great honour to join Mahi Bhai and Virat as the only others to have played 50 games across all 3 formats for 🇮🇳 A big thank you to the BCCI, my team mates, the brilliant support staff for showing faith in me and for always backing me.Onwards and upwards. Jai Hind 🙏 pic.twitter.com/9tH5R5o5Ma
— Ravindrasinh jadeja (@imjadeja) December 29, 2020
ರವೀಂದ್ರ ಜಡೇಜಾ ಹೊರತುಪಡಿಸಿದರೆ ಭಾರತ ತಂಡದ ಮಾಜಿ ನಾಯಕ ಧೋನಿ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಮಾತ್ರ ಮೂರು ಮಾದರಿಯ ಕ್ರಿಕೆಟ್ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.
ಧೋನಿ 90 ಟೆಸ್ಟ್, 350 ಏಕದಿನ ಹಾಗೂ 98 ಟಿ-20 ಟಿ20 ಪಂದ್ಯಗಳನ್ನಾಡಿದ್ದರೆ, ಕೊಹ್ಲಿ 87 ಟೆಸ್ಟ್, 251 ಏಕದಿನ ಹಾಗೂ 85 ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಇದನ್ನು ಓದಿ:ಮೆಲ್ಬೋರ್ನ್ ಪ್ರತಿಷ್ಠಿತ ಸೆಂಚುರಿ ಬೋರ್ಡ್ನಲ್ಲಿ 2ನೇ ಬಾರಿ ರಾರಾಜಿಸಿದ ರಹಾನೆ