ETV Bharat / sports

ಮೂರು ವರ್ಷಗಳ ನಂತರ ಸೀಮಿತ ಓವರ್​ಗಳ ಸರಣಿಗೆ ಅಶ್ವಿನ್ ಕಮ್​ಬ್ಯಾಕ್: ವರದಿ​

author img

By

Published : Oct 21, 2020, 8:36 PM IST

ಅಶ್ವಿನ್ ಕೊನೆಯ ಬಾರಿ 2017ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ ಹಾಗೂ ಟಿ-20 ಪಂದ್ಯವನ್ನಾಡಿದ್ದರು.

ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

ಮುಂಬೈ: ಭಾರತ ತಂಡದ ರವಿಚಂದ್ರನ್ ಮೂರು ವರ್ಷಗಳ ನಂತರ ಭಾರತ ತಂಡದ ಸೀಮಿತ ಓವರ್​ಗಳ ಕ್ರಿಕೆಟ್​ ತಂಡಕ್ಕೆ ಮರಳಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಭಾರತ ಟೆಸ್ಟ್​ ತಂಡದ ಖಾಯಂ ಸದಸ್ಯರಾಗಿರುವ ಅಶ್ವಿನ್ ಸೀಮಿತ ಓವರ್​ಗಳ ಕ್ರಿಕೆಟ್​ ಆಡಿ ಮೂರು ವರ್ಷಗಳೇ ಉರುಳಿವೆ. ಚಹಾಲ್ ಹಾಗೂ ಕುಲ್ದೀಪ್ ಯಾದವ್ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರಿಂದ ಅಶ್ವಿನ್​ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಕುಲ್ದೀಪ್ ಫಾರ್ಮ್​ನಲ್ಲಿಲ್ಲದಿರುವುದರಿಂದ ಆಯ್ಕೆ ಸಮಿತಿ ಅನುಭವಿ ಅಶ್ವಿನ್​ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡುವ ಇರಾದೆಯಲ್ಲಿದೆ ಎಂದು ಟೆಲಿಗ್ರಾಫ್​ ವೆಬ್​ಸೈಟ್​ ವರದಿ ಮಾಡಿದೆ.

ಅಶ್ವಿನ್ ಕೊನೆಯ ಬಾರಿ 2017ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ ಹಾಗೂ ಟಿ-20 ಪಂದ್ಯವನ್ನಾಡಿದ್ದರು.

ಅಶ್ವಿನ್ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವುದರಿಂದ ಆಯ್ಕೆ ಸಮಿತಿ ಅಶ್ವಿನ್​ಗೆ ಮತ್ತೊಂದು ಅವಕಾಶ ನೀಡಲು ಬಯಸಿದೆ ಎಂದು ತಿಳಿದುಬಂದಿದೆ. ಅಶ್ವಿನ್ ಐಪಿಎಲ್​ನಲ್ಲಿ​ 8 ಪಂದ್ಯಳಿಂದ 7 .11 ಎಕಾನಮಿಯಲ್ಲಿ 8 ವಿಕೆಟ್ ಪಡೆದಿದ್ದಾರೆ.

ಅಶ್ವಿನ್ ಭಾರತದ ಪರ 71 ಟೆಸ್ಟ್​ ಪಂದ್ಯಗಳಿಂದ 365 ವಿಕೆಟ್, 111 ಏಕದಿನ ಪಂದ್ಯಗಳಿಂದ 150 ವಿಕೆಟ್ ಹಾಗೂ 46 ಟಿ-20 ಪಂದ್ಯಗಳಿಂದ 52 ವಿಕೆಟ್​ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.