ETV Bharat / sports

ಕಳೆದ 10 ವರ್ಷದ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ಸ್​ ಪಡೆದಿರೋದು ಭಾರತದ ಬೌಲರ್​!

ತಮಿಳುನಾಡಿನ 33 ವರ್ಷದ ಸ್ಪಿನ್​ ಬೌಲರ್​ ಆರ್​ ಅಶ್ವಿನ್ 2010 ರಿಂದ 2019ರ ವರೆಗಿನ 10 ವರ್ಷದ ಅವಧಿಯಲ್ಲಿ 535 ವಿಕೆಟ್​ ಪಡೆಯುವ ಮೂಲಕ ದಶಕದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Ravichandran Ashwin
Ravichandran Ashwin
author img

By

Published : Dec 25, 2019, 1:40 PM IST

ಮುಂಬೈ: ಭಾರತದ ಆಫ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಕಳೆದ 10 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ತಮಿಳುನಾಡಿನ 33 ವರ್ಷದ ಸ್ಪಿನ್​ ಬೌಲರ್​ ಆರ್​ ಅಶ್ವಿನ್ ಜೂನ್​ 6 2010ರಂದು ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್​ಗೆ, 2011 ನವೆಂಬರ್​ 6ರಂದು ವಿಂಡೀಸ್​ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಜೂನ್​ 12, 2010ರಂದು ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

Ravichandran Ashwin
ಆರ್​ ಅಶ್ವಿನ್​

ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಕಡಿಮೆ 10 ವರ್ಷದ ಆಸುಪಾಸಿನಲ್ಲಿರುವ ಅಶ್ವಿನ್​ ಈ ಅವಧಿಯಲ್ಲಿ ಮೂರು ಮಾದರಿಯ ಕ್ರಿಕೆಟ್​ನಲ್ಲಿ 564 ವಿಕೆಟ್​ ಪಡೆದಿರುವ ಅವರು ದಶಕದಲ್ಲಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್​ ಪಡೆದ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಅಶ್ವಿನ್​ ನಂತರದ ಸ್ಥಾನದಲ್ಲಿ ಇಂಗ್ಲೆಂಡ್​ನ ಜೇಮ್ಸ್​ ಆ್ಯಂಡರ್ಸನ್​(535) ಹಾಗೂ ಸ್ಟುವರ್ಟ್​ ಬ್ರಾಡ್​(525) ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. 4ನೇ ಸ್ಥಾನದಲ್ಲಿ ಕಿವೀಸ್​ನ ಟಿಮ್​ ಸೌಥಿ(472) ಟ್ರೆಂಟ್​ ಬೌಲ್ಟ್​(458) ವಿಕೆಟ್​ ಪಡೆದಿದ್ದಾರೆ.​

ಅಶ್ವಿನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 362, ಏಕದಿನ ಕ್ರಿಕೆಟ್​ನಲ್ಲಿ 150 ಹಾಗೂ ಟಿ20 ಕ್ರಿಕೆಟ್​ನಲ್ಲಿ 52 ವಿಕೆಟ್​ ಪಡೆದಿದ್ದಾರೆ.

ಈ ವಿಚಾರವನ್ನು ಟ್ವೀಟ್​ ಮಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ " ಅಶ್ವಿನ್​ ದಶಕದಲ್ಲಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್​ ಪಡೆದಿದ್ದಾರೆ. ಎಂತಹ ಪ್ರಯತ್ನ... ಅವರ ಸಾಧನೆಯನ್ನು ಗಮನಿಸಿರುವುದಕ್ಕೆ ಬೇಸರವಾಗುತ್ತಿದೆ.... ಇದೊಂದು ಅದ್ಭುತ ವಿಷಯ" ಎಂದು ಅಶ್ವಿನ್​ ಸಾಧನೆಯನ್ನು ಕೊಂಡಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.