ETV Bharat / sports

ರಣಜಿಯಲ್ಲಿ ಮೊದಲ ಡಿಆರ್​ಎಸ್​ನಲ್ಲೇ ಯಶಸ್ಸು ಸಾಧಿಸಿದ ಕರ್ನಾಟಕ ತಂಡ

ಕರ್ನಾಟಕ ತಂಡ ರಣಜಿ ಇತಿಹಾಸದಲ್ಲಿ ಮೊದಲ ಡಿಆರ್​ಎಸ್​ ತೆಗೆದುಕೊಂಡ ತಂಡ ಎನಿಸಿಕೊಂಡಿತು. ಬಂಗಾಳದ ಅಭಿಷೇಕ್ ರಾಮನ್​ ಡಿಆರ್​ಎಸ್​ ಮೂಲಕ ವಿಕೆಟ್​ ಕಳೆದುಕೊಂಡ ಮೊದಲಿಗರಾದರು.

Ranji Trophy semifinal
ರಣಜಿ ಇತಿಹಾಸದಲ್ಲಿ ಮೊದಲ ಡಿಆರ್​ಎಸ್
author img

By

Published : Feb 29, 2020, 8:59 PM IST

ಕೋಲ್ಕತ್ತಾ: ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್​ನಲ್ಲಿ ಡಿಆರ್​ಎಸ್​ ಸೌಲಭ್ಯ ಒದಗಿಸಲಾಗಿದ್ದು, ಕರ್ನಾಟಕ ತಂಡ ತನ್ನ ಮೊದಲ ರಿವ್ಯೂನಲ್ಲೇ ಯಶಸ್ಸು ಸಾಧಿಸಿದೆ.

ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದ ನಡುವೆ ರಣಜಿ ಸೆಮಿಫೈನಲ್​ ನಡೆಯುತ್ತಿದೆ. ಬಿಸಿಸಿಐ 2020ರಿಂದ ರಣಜಿ ಸೆಮಿಫೈನಲ್​ ಹಾಗೂ ಫೈನಲ್​ ಪಂದ್ಯಗಳಿಗೆ ಕೆಲವು ನಿಬಂಧನೆ ಹೇರಿ ಡಿಆರ್​ಎಸ್​ ಸೌಲಭ್ಯ ಒದಗಿಸಿದೆ. ಒಂದು ತಂಡ ಇನ್ನಿಂಗ್ಸ್​ನಲ್ಲಿ ನಾಲ್ಕು ಬಾರಿ ಅಂಪೈರ್​ ತೀರ್ಪನ್ನು ಪ್ರಶ್ನಿಸಬಹುದಾಗಿದೆ.

ಕರ್ನಾಟಕ ತಂಡ ರಣಜಿ ಇತಿಹಾಸದಲ್ಲಿ ಮೊದಲ ಡಿಆರ್​ಎಸ್​ ತೆಗೆದುಕೊಂಡ ತಂಡ ಎನಿಸಿಕೊಂಡಿತು. ಬಂಗಾಳದ ಅಭಿಷೇಕ್ ರಾಮನ್​ ಡಿಆರ್​ಎಸ್​ ಮೂಲಕ ವಿಕೆಟ್​ ಕಳೆದುಕೊಂಡ ಮೊದಲಿಗರಾದರು.

ಅಭಿಮನ್ಯು ಮಿಥುನ್​ ಬೌಲಿಂಗ್​ನಲ್ಲಿ ರಾಮನ್​ ಕೀಪರ್​ಗೆ ಕ್ಯಾಚ್​ ನೀಡಿದ್ದರು. ಆದರೆ ಅಂಪೈರ್​ ಔಟ್​ ನೀಡಿರಲಿಲ್ಲ. ನಂತರ ಕರ್ನಾಟಕ ತಂಡದ ನಾಯಕ ಕರುಣ್​ ನಾಯರ್​ ರಿವ್ಯೂ​ ಕೇಳಿದರು. ಮೂರನೇ ಅಂಪೈರ್​ ಟಿವಿ ರಿಪ್ಲೇ ನೋಡಿ ಔಟ್​ ಎಂದು ಮೈದಾನದ ಅಂಪೈರ್​ ತೀರ್ಪಿಗೆ ವ್ಯತಿರಿಕ್ತ ತೀರ್ಪು ನೀಡಿದರು.

ಇದೇ ರೀತಿ ಮೊದಲ ಬಾರಿಗೆ ಬ್ಯಾಟ್ಸ್​ಮನ್​ ಶ್ರೀವಾಸ್ತವ್​ ಗೋಸ್ವಾಮಿ ಕೂಡ ಅಂಪೈರ್​ ನೀಡಿದ ಔಟ್​ ತೀರ್ಪನ್ನು ಪ್ರಶ್ನಿಸಿ ರಿವ್ಯೂ​ ತೆಗೆದುಕೊಂಡರು. ಆದರೆ ಈ ತೀರ್ಪು ಅಂಪೈರ್​ ಪರ ಬಂದಿತು. ಒಟ್ಟಾರೆ ರಣಜಿ ಸೆಮಿಫೈನಲ್​ನಲ್ಲಿ ಇದೇ ಮೊದಲು ಜಾರಿಗೆ ಬಂದಿರುವ ಡಿಆರ್​ಎಸ್​ ನಿಯಮ ಕರ್ನಾಟಕ ತಂಡಕ್ಕೆ ಅನುಕೂಲಕರವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.