ETV Bharat / sports

ದೇಶಿ ಕ್ರಿಕೆಟ್​ನ ಮಹಾಟೂರ್ನಿ ರಣಜಿಗೆ ನಾಳೆ ಚಾಲನೆ... ಬಲಿಷ್ಠ ಕರ್ನಾಟಕ ತಂಡಕ್ಕೆ ತಮಿಳುನಾಡು ಸವಾಲು!

author img

By

Published : Dec 8, 2019, 10:12 AM IST

86ನೇ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಚಂಡೀಘಡ ತಂಡ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡುತ್ತಿದ್ದು, ಈ ಮಹಾಟೂರ್ನಿ ನಾಳೆ ಆರಂಭವಾಗಲಿದೆ.

Ranji Trophy news
ರಣಜಿ

ಹೈದರಾಬಾದ್: ಭಾರತದ ದೇಶೀಯ ಕ್ರಿಕೆಟ್​​ನ ಮಹಾಟೂರ್ನಿ ರಣಜಿ ಟ್ರೋಫಿಗೆ ನಾಳೆ ಚಾಲನೆ ದೊರೆಯಲಿದ್ದು, ಪ್ರಶಸ್ತಿಗಾಗಿ 38 ತಂಡಗಳು ಸುಮಾರು ಮೂರು ತಿಂಗಳ ಕಾಲ ಸೆಣಸಾಟ ನಡೆಸಲಿವೆ.

86ನೇ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಚಂಡೀಘಡ ತಂಡ ಪದಾರ್ಪಣೆ ಮಾಡುತ್ತಿದೆ. ತನ್ನ ಚೊಚ್ಚಲ ಪಂದ್ಯದಲ್ಲಿ ಅರುಣಾಚಲ ಪ್ರದೇಶವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್​ ವಿದರ್ಭ ತಂಡ ಆಂಧ್ರ ಪ್ರದೇಶವನ್ನು ನಾಳೆ ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

ರಣಜಿ ಟ್ರೋಫಿ ಟೂರ್ನಿಗೆ ಅಂಬೆಗಾಲಿಡುತ್ತಿರುವ ಚಂಡೀಘಡ ತಂಡಕ್ಕೆ ಟೀಂ ಇಂಡಿಯಾವನ್ನು ಕೆಲ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ವಿಆರ್​ವಿ ಸಿಂಗ್ ಮುಖ್ಯ ಕೋಚ್ ಆಗಿದ್ದಾರೆ. ಐಪಿಎಲ್​​ನಲ್ಲಿ ಕೊಂಚ ಭರವಸೆ ಮೂಡಿಸಿದ್ದ ಮನನ್ ವೋಹ್ರಾ ಹಾಗೂ ಬರೀಂದರ್ ಸ್ರನ್ ಚಂಡೀಘಡ ತಂಡದ ಪ್ರಮುಖ ಆಟಗಾರರು. ಇರದ ಜೊತೆಗೆ U-19 ಆಟಗಾರ ಅರ್ಜುನ್ ಅಜಾದ್ ಸಹ ಮಿಂಚು ಹರಿಸಲು ಸಿದ್ಧವಾಗಿದ್ದಾರೆ.

Ranji Trophy news
ಹಾಲಿ ಚಾಂಪಿಯನ್​ ವಿದರ್ಭ ತಂಡ

ಸುಮಾರು ಮೂರು ತಿಂಗಳ ಕಾಲ ನಡೆಯುವ ಈ ಮಹಾಟೂರ್ನಿಯಲ್ಲಿ 153 ಪಂದ್ಯ ನಡೆಯಲಿದ್ದು, ಮಾರ್ಚ್ 9ರಂದು ಫೈನಲ್​​ ಆರಂಭವಾಲಿದೆ. ವಿದರ್ಭ ತಂಡ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಇತ್ತ ವಿಜಯ್ ಹಜಾರೆ ಹಾಗೂ ಸೈಯದ್ ಮುಷ್ತಾಕ್ ಅಲಿ ಟೂರ್ನಿಯನ್ನು ಗೆದ್ದಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ರಣಜಿ ಟ್ರೋಫಿ: ಮಯಾಂಕ್​​, ಪಡಿಕ್ಕಲ್​ ಸೇರಿ ಬಲಿಷ್ಠ ಕರ್ನಾಟಕ ತಂಡ ಪ್ರಕಟ!

ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದು, ಮಯಾಂಕ್ ಅಗರ್ವಾಲ್​, ದೇವದತ್ ಪಡಿಕ್ಕಲ್, ಕೆ.ಗೌತಮ್​​, ಶ್ರೇಯಸ್ ಗೋಪಾಲ್ ಸೇರಿದಂತೆ ಬಲಿಷ್ಠ ಆಟಗಾರರ ದಂಡೇ ಇದೆ. ಡಿ. 9ರಂದು ಡಿಂಡಿಗಲ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರುಣ್ ನಾಯರ್ ತಂಡ ತಮಿಳುನಾಡನ್ನು ಎದುರಿಸಲಿದೆ.

ಕರ್ನಾಟಕದ ಆಟಗಾರರಾದ ವಿನಯ್ ಕುಮಾರ್ ರಾಜ್ಯ ತಂಡ ತೊರೆದು ಪುದುಚೇರಿ ಹಾಗೂ ಸ್ಟುವರ್ಟ್​ ಬಿನ್ನಿ ನಾಗಾಲ್ಯಾಂಡ್ ಹಾಗೂ ಸಿ.ಎಂ.ಗೌತಮ್​​ ಗೋವಾ ತಂಡ ಸೇರಿದ್ದಾರೆ. ಆದರೆ ಕೆಪಿಎಲ್​ ಫಿಕ್ಸಿಂಗ್​ನಲ್ಲಿ ಸಿ.ಎಂ.ಗೌತಮ್​ ವಿಚಾರಣೆ ಪ್ರಗತಿಯಲ್ಲಿರೋ ಕಾರಣ ಗೋವಾ ತಂಡದಿಂದ ಹೊರಗಿಡಲಾಗಿದೆ.

ಕಳೆದ ಬಾರಿಯಂತೆ ಈ ಬಾರಿಯೂ ತಂಡಗಳ ವಿಂಗಡಣೆ ಮಾಡಲಾಗಿದೆ. ಎ, ಬಿ, ಸಿ ಹಾಗೂ ಪ್ಲೇಟ್ ಗ್ರೂಪ್ ಎಂದು ವಿಂಗಡಿಸಲಾಗಿದೆ. ಎ ಮತ್ತು ಬಿ ಗ್ರೂಪ್​ನಲ್ಲಿ ಒಂಭತ್ತು ತಂಡಗಳಿವೆ. ಸಿ ಮತ್ತು ಪ್ಲೇಟ್ ಗ್ರೂಪ್​​ನಲ್ಲಿ ತಲಾ ಹತ್ತು ತಂಡಗಳಿವೆ. ಇದೇ ಮೊದಲ ಬಾರಿಗೆ ರಣಜಿಯ ನಾಕೌಟ್ ಹಂತದಲ್ಲಿ ಡಿಆರ್​ಎಸ್ ಬಳಕೆಗೆ ಬಿಸಿಸಿಐ ಸಮ್ಮತಿಸಿದೆ. ಆದರೆ ಹಾಕ್​ ಐ ಹಾಗೂ ಅಲ್ಟ್ರಾ ಎಡ್ಜ್​​ ಬಳಕೆಗೆ ಅವಕಾಶ ನೀಡಿಲ್ಲ.

ಗ್ರೂಪ್ ಎ ಗ್ರೂಪ್ ಬಿ ಗ್ರೂಪ್ ಸಿ ಪ್ಲೇಟ್ ಗ್ರೂಪ್
ಆಂಧ್ರ ಪ್ರದೇಶ ಬರೋಡಾ ಅಸ್ಸೋಂ ಅರುಣಾಚಲ ಪ್ರದೇಶ
ಬೆಂಗಾಲ್ ಹಿಮಾಚಲ ಪ್ರದೇಶ ಛತ್ತೀಸ್​ಘಡ ಬಿಹಾರ
ದೆಹಲಿ ಕರ್ನಾಟಕ ಹರಿಯಾಣ ಚಂಡೀಘಡ
ಗುಜರಾತ್ ಮಧ್ಯಪ್ರದೇಶ ಜಮ್ಮು ಕಾಶ್ಮೀರ ಗೋವಾ
ಹೈದರಾಬಾದ್ ಮುಂಬೈ ಜಾರ್ಖಂಡ್ ಮಣಿಪುರ
ಕೇರಳ ರೈಲ್ವೇಸ್ ಮಹಾರಾಷ್ಟ್ರ ಮೇಘಾಲಯ
ಪಂಜಾಬ್ ತಮಿಳುನಾಡು ಒಡಿಶಾ ಮಿಜೋರಾಂ
ರಾಜಸ್ಥಾನ ಸೌರಾಷ್ಟ್ರ ಸರ್ವೀಸ್ ನಾಗಾಲ್ಯಾಂಡ್
ವಿದರ್ಭ ಉತ್ತರ ಪ್ರದೇಶ ತ್ರಿಪುರ ಪುದುಚೇರಿ
- - ಉತ್ತರಾಖಂಡ ಸಿಕ್ಕಿಂ

Intro:Body:

ಹೈದರಾಬಾದ್: ಭಾರತದ ದೇಶೀಯ ಕ್ರಿಕೆಟ್ ಟೂರ್ನಿಯ ಮಹಾಟೂರ್ನಿ ರಣಜಿ ಟ್ರೋಫಿಗೆ ನಾಳೆ ಚಾಲನೆ ದೊರೆಯಲಿದ್ದು, ಪ್ರಶಸ್ತಿಗಾಗಿ 38 ತಂಡಗಳು ಸುಮಾರು ಮೂರು ತಿಂಗಳ ಕಾಲ ಸೆಣಸಾಟ ನಡೆಸಲಿವೆ.

86ನೇ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಚಂಡೀಗಢ ತಂಡ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡುತ್ತಿದೆ. ತನ್ನ ಮೊದಲ ಚೊಚ್ಚಲ ಪಂದ್ಯದಲ್ಲಿ ಅರುಣಾಚಲ ಪ್ರದೇಶವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್​ ವಿದರ್ಭ ತಂಡ ಆಂಧ್ರಪ್ರದೇಶವನ್ನು ನಾಳೆ ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

ರಣಜಿ ಟ್ರೋಫಿ ಟೂರ್ನಿಗೆ ಅಂಬೆಗಾಲಿಡುತ್ತಿರುವ ಚಂಡೀಗಢ ತಂಡಕ್ಕೆ ಟೀಂ ಇಂಡಿಯಾವನ್ನು ಕೆಲ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ವಿಆರ್​ವಿ ಸಿಂಗ್ ಮುಖ್ಯ ಕೋಚ್ ಆಗಿದ್ದಾರೆ. ಐಪಿಎಲ್​​ನಲ್ಲಿ ಕೊಂಚ ಭರವಸೆ ಮೂಡಿಸಿದ್ದ ಮನನ್ ವೋಹ್ರಾ ಹಾಗೂ ಬರೀಂದರ್ ಸ್ರನ್ ಚಂಡೀಗಢ ತಂಡದ ಪ್ರಮುಖ ಆಟಗಾರರು. ಇರದ ಜೊತೆಗೆ U-19 ಆಟಗಾರ ಅರ್ಜುನ್ ಅಜಾದ್ ಸಹ ಮಿಂಚು ಹರಿಸಲು ಸಿದ್ಧವಾಗಿದ್ದಾರೆ.

ಸುಮಾರು ಮೂರು ತಿಂಗಳ ಈ ಮಹಾಟೂರ್ನಿಯಲ್ಲಿ 153 ಪಂದ್ಯ ನಡೆಯಲಿದ್ದು ಮಾರ್ಚ್ 9ರಂದು ಆರಂಭವಾಲಿದೆ. ವಿದರ್ಭ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಇತ್ತ ವಿಜಯ್ ಹಜಾರೆ ಹಾಗೂ ಸೈಯದ್ ಮುಷ್ತಾಕ್ ಅಲಿ ಟೂರ್ನಿಯನ್ನು ಗೆದ್ದಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 

ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದು, ಮಯಾಂಕ್ ಅಗರ್ವಾಲ್​, ದೇವದತ್ ಪಡಿಕ್ಕಲ್, ಕೆ.ಗೌತಮ್​​, ಶ್ರೇಯಸ್ ಗೋಪಾಲ್ ಸೇರಿದಂತೆ ಬಲಿಷ್ಠ ಆಟಗಾರರ ದಂಡೇ ಇದೆ.  ಡಿ.9ರಂದು ಡಿಂಡಿಗಲ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರುಣ್ ನಾಯರ್ ತಂಡ ತಮಿಳುನಾಡನ್ನು ಎದುರಿಸಲಿದೆ.

ಕರ್ನಾಟಕದ ಆಟಗಾರರಾದ ವಿನಯ್ ಕುಮಾರ್ ರಾಜ್ಯ ತಂಡ ತೊರೆದು ಪುದುಚೇರಿ ಹಾಗೂ ಸ್ಟುವರ್ಟ್​ ಬಿನ್ನಿ ನಾಗಾಲ್ಯಾಂಡ್ ಹಾಗೂ ಸಿ.ಎಂ.ಗೌತಮ್​​ ಗೋವಾ ತಂಡ ಸೇರಿದ್ದಾರೆ. ಆದರೆ ಕೆಪಿಎಲ್​ ಫಿಕ್ಸಿಂಗ್​ನಲ್ಲಿ ಸಿ.ಎಂ ಗೌತಮ್​ ವಿಚಾರಣೆ ಪ್ರಗತಿಯಲ್ಲಿರೋ ಕಾರಣ ಗೋವಾ ತಂಡದಿಂದ ಹೊರಗಿಡಲಾಗಿದೆ.

ಕಳೆದ ಬಾರಿಯಂತೆ ಈ ಬಾರಿಯೂ ತಂಡಗಳ ವಿಂಗಡಣೆ ಮಾಡಲಾಗಿದೆ. ಎ,ಬಿ,ಸಿ ಹಾಗೂ ಪ್ಲೇಟ್ ಗ್ರೂಪ್ ಎಂದು ವಿಂಗಡಿಸಲಾಗಿದೆ. ಎ ಮತ್ತು ಬಿ ಗ್ರೂಪ್​ನಲ್ಲಿ ಒಂಭತ್ತು ತಂಡಗಳಿವೆ.  ಸಿ ಮತ್ತು ಪ್ಲೇಟ್ ಗ್ರೂಪ್​​ನಲ್ಲಿ ತಲಾ ಹತ್ತು ತಂಡಗಳಿವೆ. ಇದೇ ಮೊದಲ ಬಾರಿಗೆ ರಣಜಿಯ ನಾಕೌಟ್ ಹಂತದಲ್ಲಿ ಡಿಆರ್​ಎಸ್ ಬಳಕೆಗೆ ಬಿಸಿಸಿಐ ಸಮ್ಮತಿಸಿದೆ. ಆದರೆ ಹಾಕ್​ ಐ ಹಾಗೂ ಅಲ್ಟ್ರಾ ಎಡ್ಜ್​​ ಬಳಕೆಗೆ ಅವಕಾಶ ನೀಡಿಲ್ಲ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.