ಬೆಂಗಳೂರು: ಅಭಿಮನ್ಯು ಮಿಥುನ್ ಹಾಗೂ ಕೆ ಗೌತಮ್ ಬೌಲಿಂಗ್ ದಾಳಿಗೆ ತತ್ತರಿಸಿದ ಬರೋಡಾ ತಂಡ ಕೇವಲ 85 ರನ್ಗಳಿ ಆಲೌಟ್ ಆಗಿದೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದು, ಬರೋಡಾ ತಂಡವನ್ನು ಕೇವಲ 85ಕ್ಕೆ ಕಟ್ಟಿಹಾಲುವಲ್ಲಿ ಸಫಲರಾಗಿದ್ದಾರೆ.
ಟಾಸ್ ಗೆದ್ದು ಆಯ್ದುಕೊಂಡ ಕರ್ನಾಟಕ ಎದುರಾಳಿಯನ್ನು ಬ್ಯಾಟಿಂಗ್ ಆಹ್ವಾನಿಸಿತು. ಇದೇ ಮೊದಲ ಪಂದ್ಯದಲ್ಲಿ ದಾಳಿಗಿಳಿದ ಪ್ರಸಿದ್ ಕೃಷ್ಣ ಬರೋಡಾದ ಆರಂಭಿಕ ಬ್ಯಾಟ್ಸ್ಮನ್ ಕೇದಾರ್ ದೇವಧರ್(3) ಹಾಗೂ ವಿಷ್ಣು ಸೋಲಂಕಿ(0) ವಿಕೆಟ್ ಪಡೆದು ಆರಂಭಿಕ ಮುನ್ನಡೆ ದೊರಕಿಸಿಕೊಟ್ಟರು.
ಪ್ರಸಿದ್ ಕೃಷ್ಣ ನಂತರ ಬರೋಡಕ್ಕೆ ಶಾಕ್ ಕೊಟ್ಟ ಮಿಥುನ್ ದೀಪಕ್ ಹೂಡಾ(20), ಕೃನಾಲ್ ಪಾಂಡ್ಯ(0) ಹಾಗೂ ಅಭಿಮನ್ಯು ರಜಪೂತ್(0) ವಿಕೆಟ್ ಪಡೆದು ಬರೋಡ ಆಘಾತ ನೀಡಿದರು. ಇವರಿಬ್ಬರು ಆರಂಭಿಕರನ್ನು ಪೆವಿಲಿಯನ್ಗಟ್ಟಿದರೆ, ಕೆ ಗೌತಮ್ 45 ರನ್ಗಳಿಸಿ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಅಹ್ಮದ್ನೂರ್ ಪಠಾಣ್, ವಿಕೆಟ್ ಕೀಪರ್ ವಿರಾಜ್ ಭೋಸ್ಲೆ(3) ಹಾಗೂ ಪಾರ್ಥ್ ಕೊಹ್ಲಿ(0) ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ ಸೊಯೆಬ್ ಸೊಪಾರಿಯಾ ವಿಕೆಟ್ ಪಡೆಯುವ ಮೂಲಕ ಬರೋಡಾ ಇನ್ನಿಂಗ್ಸ್ಗೆ ಇತಿಶ್ರೀ ಹಾಡಿದರು.
ಬರೋಡಾ ಪರ ಆರಂಭಿಕ ಅಹ್ಮದ್ನೂರ್ ಪಠಾಣ್(45), ದೀಪಕ್ ಹೂಡ(20) ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು. 5 ಬ್ಯಾಟ್ಸ್ಮನ್ಗಳು ಸೊನ್ನೆ ಸುತ್ತಿದರೆ, 4 ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.