ETV Bharat / sports

ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣನ ಅಡ್ಡಿ ಸಾಧ್ಯತೆ - ಬ್ರಿಸ್ಬೇನ್​ ಟೆಸ್ಟ್ ಪಂದ್ಯ

ಬ್ರಿಸ್ಬೇನ್​ನಲ್ಲಿ ಮೊದಲ ದಿನವು ಪ್ರಕಾಶಮಾನವಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತದೆ ಎಂದು ನಿರೀಕ್ಷಿಸಿದ್ದರೆ, ಎರಡನೇ, ನಾಲ್ಕನೇ ಮತ್ತು ಐದನೇ ದಿನ ಮಳೆಯಾಗುವ ಮುನ್ಸೂಚನೆ ಇದೆ.

Rain could affect fourth and final India-Australia Test
ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣನ ಅಡ್ಡಿ ಸಾಧ್ಯತೆ
author img

By

Published : Jan 15, 2021, 8:29 AM IST

ಬ್ರಿಸ್ಬೇನ್: ಗಬ್ಬಾದಲ್ಲಿ ಇಂದಿನಿಂದ ಪ್ರಾರಂಭವಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಳೆ ನಿರ್ಣಾಯಕ ಪಾತ್ರ ವಹಿಸುತ್ತದೆ.

ಶುಕ್ರವಾರದ ಮೊದಲ ದಿನವು ಪ್ರಕಾಶಮಾನವಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತದೆ ಎಂದು ನಿರೀಕ್ಷಿಸಿದ್ದರೆ, ಎರಡನೇ, ನಾಲ್ಕನೇ ಮತ್ತು ಐದನೇ ದಿನ ಮಳೆಯಾಗುವ ಮುನ್ಸೂಚನೆ ಇದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ "ನೀವು ಹವಾಮಾನವನ್ನು ನೋಡುತ್ತಾ ಕ್ರಿಕೆಟ್ ಆಡಲಾಗುವುದಿಲ್ಲ. ನಮ್ಮ ಮಟ್ಟಿಗೆ ನಾವು ಸಂಪೂರ್ಣ ಆಟವನ್ನು ಎದುರುನೋಡುತ್ತಿದ್ದೇವೆ. ನಾವು ಸಾಧ್ಯವಾದಷ್ಟೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ. ನಮ್ಮ ಹುಡುಗರು ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಾರೆ, ಮತ್ತೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.

ಓದಿ ಪೆವಿಲಿಯನ್ ಸೇರಿದ ಆಸೀಸ್​ ಆರಂಭಿಕ ಜೋಡಿ: ಭೋಜನ ವಿರಾಮದ ವೇಳೆಗೆ ಭಾರತ ಮೇಲುಗೈ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹಿಂದಿನ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಅವಕಾಶ ಕಳೆದುಕೊಂಡ ಕಾರಣ ಸರಣಿ1-1ರಿಂದ ಸಮವಾಗಿದ್ದು, ಆಸ್ಟ್ರೇಲಿಯನ್ನರು ಮಳೆಯ ನಿರೀಕ್ಷೆಯ ಬಗ್ಗೆ ಆತಂಕ ಹೊಂದಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ 2018-19 ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಸಹ ಮಳೆಯಿಂದ ಪ್ರಭಾವಿತವಾಗಿತ್ತು. ಭಾರತದ ಗೆಲುವು ಹತ್ತರವಿದ್ದರೂ ಮಳೆಯ ಕಾರಣದಿಂದಾಗಿ 5ನೇ ದಿನದ ಆಟವು ಸಂಪೂರ್ಣವಾಗಿ ರದ್ದುಗೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.