ದುಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಐಸಿಸಿಯ ಬುಧವಾರ ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ನಾಯಕ ಕೊಹ್ಲಿ ಒಂದು ಸ್ಥಾನ ಬಡ್ತಿ ಪಡೆದು 6ನೇ ಸ್ಥಾನಕ್ಕೇರಿದ್ದಾರೆ.
816 ಅಂಕಗಳನ್ನು ಹೊಂದಿರುವ ಕೆಎಲ್ ರಾಹುಲ್ 915 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೇವಿಡ್ ಮಲನ್ ನಂತರದ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ (801) ಒಂದು ಸ್ಥಾನ ಮೇಲೇರಿ 3ಕ್ಕೇರಿದ್ದರೆ, ಆಸ್ಟ್ರೇಲಿಯಾದ ನಾಯಕ ಫಿಂಚ್(788) 3 ರಿಂದ 4ಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ವಾನ್ ಡರ್ ಡಾಸೆನ್ (700) 5 ರಲ್ಲಿದ್ದರೆ ಕೊಹ್ಲಿ (697) 6ನೇ ಶ್ರೇಯಾಂಕ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 99 ರನ್ಗಳಿಸಿದ ಡೆವೋನ್ ಕಾನ್ವೆ 46 ಸ್ಥಾನಕ್ಕೆ ಜಿಗಿದು 17ಕ್ಕೆ ಹಾಗೂ 2ನೇ ಪಂದ್ಯದಲ್ಲಿ 97 ರನ್ಗಳಿಸಿದ ಮಾರ್ಟಿನ್ ಗಪ್ಟಿಲ್ 3 ಸ್ಥಾನ ಬಡ್ತಿ ಪಡೆದು 11ನೇ ಶ್ರೇಯಾಂಕ ಪಡೆದಿದ್ದಾರೆ.
ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ (736) ಅಗ್ರಸ್ಥಾನದಲ್ಲಿದ್ದಾರೆ, ನಂತರ ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿ (733), ಅಫ್ಘನ್ನ ಮುಜೀಬ್ (730), ಇಂಗ್ಲೆಂಡ್ನ ಆದಿಲ್ ರಶೀದ್ (700) ಆಸ್ಟ್ರೇಲಿಯಾದ ಆ್ಯಡಂ ಜಂಪಾ (676) ಮೊದಲ 5 ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಯಾವುದೇ ಭಾರತೀಯ ಬೌಲರ್ ಕಾಣಿಸಿಕೊಂಡಿಲ್ಲ.
ಇದನ್ನು ಓದಿ:'ನ್ಯೂಜಿಲ್ಯಾಂಡ್ನಲ್ಲಿ 3ನೇ ದಿನ 36 ಓವರ್ಗಳಲ್ಲಿ ಸೋತಿದ್ದೆವು, ಅಂದು ಯಾರೂ ಪಿಚ್ ಬಗ್ಗೆ ಟೀಕಿಸಲಿಲ್ಲ'