ರಾಜ್ಕೋಟ್: ಸದ್ಯ ಭಾರತ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್, 52 ಎಸೆತಗಳಲ್ಲಿ 80 ರನ್ ಸಿಡಿಸಿ ಮಿಂಚಿದ್ದರು. ಕನ್ನಡಿಗನ ಆಟವನ್ನ ಮೆಚ್ಚಿಕೊಂಡಿರುವ ನಾಯಕ ವಿರಾಟ್ ಸೇರಿದಂತೆ ಕೆಲವು ಹಿರಿಯ ಆಟಗಾರರು ರಾಹುಲ್ ಕೌಶಲ್ಯ ಕೊಂಡಾಡಿದ್ದಾರೆ.
- ' class='align-text-top noRightClick twitterSection' data=''>
ಪಂದ್ಯ ಮುಗಿದ ನಂತರ ಮಾತನಾಡಿರುವ ಕೆ.ಎಲ್.ರಾಹುಲ್, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದು ಸವಾಲಿನ ಕೆಲಸ. ಸವಾಲು ಸ್ವೀಕರಿಸಿರುವ ನಾನು, ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ವಿಶ್ವ ಕ್ರಿಕೆಟ್ನ ಉತ್ತಮ ಆಟಗಾರರಾದ ಎಬಿಡಿ ವಿಲಿಯರ್ಸ್, ಕೇನ್ ವಿಲಿಯಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಹಳೇ ಪಂದ್ಯದ ವಿಡಿಯೋ ನೋಡುತ್ತಿರುವುದಾಗಿ ಹೇಳಿದ್ದಾರೆ.
ವಿಶ್ವದ ಬೆಸ್ಟ್ ಆಟಗಾರರ ಹಳೆ ಪಂದ್ಯದ ವಿಡಿಯೋಗಳನ್ನ ನೋಡುತ್ತಿದ್ದೇನೆ. ಅವರು ಇನ್ನಿಂಗ್ಸ್ ಕಟ್ಟುತ್ತಿದ್ದ ರೀತಿ, ಕೆಲವು ಸಂದಿಗ್ದ ಸಂದರ್ಭದಲ್ಲಿ ಹೇಗೆ ಬ್ಯಾಟಿಂಗ್ ನಡೆಸುತ್ತಿದ್ದರು ಎಂದು ನೋಡಿ ತಿಳಿದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಇಲ್ಲಿಯವರೆಗೆ ಕೆ.ಎಲ್.ರಾಹುಲ್ 17 ಬಾರಿ ಓಪನರ್, ಮೂರು ಬಾರಿ 2ನೇ ಕ್ರಮಾಂಕ, ನಾಲ್ಕು ಬಾರಿ 4ನೇ ಕ್ರಮಾಂಕ, 2 ಬಾರಿ 5ನೇ ಕ್ರಮಾಂಕ ಮತ್ತು ಒಂದು ಬಾರಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.