ಮುಂಬೈ: ವಾಂಖೆಡೆಯಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ಗೆ 222 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ವಿಕೆಟ್ ಮಯಾಂಕ್ ಅಗರ್ವಾಲ್(14) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಬಂದ ಯುನಿವರ್ಸಲ್ ಬಾಸ್ ಕ್ರಿಸ್ಗೇಲ್ ನಾಯಕ ರಾಹುಲ್ ಜೊತೆಗೂಡಿ 2ನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ನೀಡಿದರು. ಗೇಲ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 40 ರನ್ಗಳಿಸಿ ಯುವ ಆಲ್ರೌಂಡರ್ ರಿಯಾನ್ ಪರಾಗ್ಗೆ ವಿಕೆಟ್ ಒಪ್ಪಿಸಿದರು.
-
Innings Break!@PunjabKingsIPL post a mammoth total of 221/6 on the board, courtesy batting fireworks from @klrahul11 (91), Deepak Hooda (64) and Chris Gayle (40)
— IndianPremierLeague (@IPL) April 12, 2021 " class="align-text-top noRightClick twitterSection" data="
Scorecard - https://t.co/Fy73m6QPUV #VIVOIPL pic.twitter.com/7B4iO1rUt5
">Innings Break!@PunjabKingsIPL post a mammoth total of 221/6 on the board, courtesy batting fireworks from @klrahul11 (91), Deepak Hooda (64) and Chris Gayle (40)
— IndianPremierLeague (@IPL) April 12, 2021
Scorecard - https://t.co/Fy73m6QPUV #VIVOIPL pic.twitter.com/7B4iO1rUt5Innings Break!@PunjabKingsIPL post a mammoth total of 221/6 on the board, courtesy batting fireworks from @klrahul11 (91), Deepak Hooda (64) and Chris Gayle (40)
— IndianPremierLeague (@IPL) April 12, 2021
Scorecard - https://t.co/Fy73m6QPUV #VIVOIPL pic.twitter.com/7B4iO1rUt5
ಗೇಲ್ ನಂತರ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೀಪಕ್ ಹೂಡ ರಾಯಲ್ಸ್ ಬೌಲರ್ಗಳ ದಾಳಿಯನ್ನು ಪುಡಿಗಟ್ಟಿದರು. ಅವರು ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಒಟ್ಟಾರೆ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ 64 ರನ್ ಸಿಡಿಸಿ ಕ್ರಿಸ್ ಮೋರಿಸ್ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮುನ್ನ ನಾಯಕ ರಾಹುಲ್ ಜೊತೆಗೂಡಿ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 46 ಎಸೆತಗಳಲ್ಲಿ 105 ರನ್ಗಳ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.
-
.@klrahul11's fantastic knock comes to an end on 91.
— IndianPremierLeague (@IPL) April 12, 2021 " class="align-text-top noRightClick twitterSection" data="
Live - https://t.co/PhX8FyJiZZ #RRvPBKS #VIVOIPL pic.twitter.com/bkXP6vVdBt
">.@klrahul11's fantastic knock comes to an end on 91.
— IndianPremierLeague (@IPL) April 12, 2021
Live - https://t.co/PhX8FyJiZZ #RRvPBKS #VIVOIPL pic.twitter.com/bkXP6vVdBt.@klrahul11's fantastic knock comes to an end on 91.
— IndianPremierLeague (@IPL) April 12, 2021
Live - https://t.co/PhX8FyJiZZ #RRvPBKS #VIVOIPL pic.twitter.com/bkXP6vVdBt
ಕೊನೆಯಲ್ಲಿ ಅಬ್ಬರಿಸಿದ ರಾಹುಲ್ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 91 ರನ್ ಸಿಡಿಸಿ ಯುವ ಬೌಲರ್ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿ ಕೇವಲ 9 ರನ್ಗಳಿಂದ ಶತಕವಂಚಿತರಾದರು. ಉಳಿದಂತೆ ಪೂರನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಶಾರುಖ್ 6ರನ್ಗಳಿಸಿದರು.
ಪಂಜಾಬ್ ಅಬ್ಬರದ ನಡುವೆ ಮಿಂಚಿದ 23 ವರ್ಷದ ಚೇತನ್ ಸಕಾರಿಯಾ 31 ರನ್ ನೀಡಿ 3 ವಿಕೆಟ್ ಪಡೆದರು. ಮೋರಿಸ್ 41 ರನ್ ನೀಡಿ 2 ವಿಕೆಟ್ ಪಡೆದರೆ, ಪಾರ್ಟ್ ಟೈಮ್ ಬೌಲರ್ ಪರಾಗ್ ಒಂದು ವಿಕೆಟ್ ಪಡೆದರು.