ETV Bharat / sports

ಕೊಹ್ಲಿಗೂ ಮೊದಲೇ ಪಿಂಕ್ ಬಾಲ್​ನಲ್ಲಿ ಶತಕ ಸಿಡಿಸಿದ್ದರು ರಾ'ವಾಲ್‌' ದ್ರಾವಿಡ್..

author img

By

Published : Nov 24, 2019, 1:38 PM IST

Updated : Nov 24, 2019, 1:58 PM IST

ಪಿಂಕ್ ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೂ ಮೊದಲೇ ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಶತಕ ಸಿಡಿಸಿದ್ದರು.

ರಾಹುಲ್ ದ್ರಾವಿಡ್

ನವದೆಹಲಿ: ಭಾರತ ಮತ್ತು ಬಾಂಗ್ಲಾ ನಡುವೆ ನಡೆಯುತ್ತಿರುವ ಪಿಕ್ ಬಾಲ್ ಟೆಸ್ಟ್​ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದು, ಪಿಂಕ್ ಬಾಲ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆದರೆ, ನಿಜಕ್ಕೂ ಕೊಹ್ಲಿಗಿಂತ ಮೊದಲೇ ಅಂದರೆ 2011ರಲ್ಲೇ ಟೀಂ ಇಂಡಿಯಾ ಮಾಜಿ ಆಟಗಾರ ಕನ್ನಡಿಗ ರಾಹುಲ್ ದ್ರಾವಿಡ್ ಪಿಂಕ್ ಬಾಲ್​ನಲ್ಲಿ ಶತಕ ಸಿಡಿಸಿದ್ದರು. 2011ರಲ್ಲಿ ನಡೆದ ಇಂಗ್ಲೆಂಡ್ ಕೌಂಟಿ ಚಾಂಪಿಯನ್​ಷಿಪ್​ನಲ್ಲಿ ಎಂಸಿಸಿ ತಂಡದ ಪರ ರಾಹುಲ್ ದ್ರಾವಿಡ್ ಶತಕ ಸಿಡಿದ್ದರು.

ಮೊದಲ ಇನ್ನಿಂಗ್ಸ್​​ನಲ್ಲಿ ಒಂದು ರನ್​ ಕೂಡ ಗಳಿಸಿಲು ಸಾಧ್ಯವಾಗದೆ ರಹುಲ್ ದ್ರಾವಿಡ್​ ಶೂನ್ಯಕ್ಕೆ ಔಟ್​ ಆಗಿದ್ದರು. ಆದರೆ, ಎರಡನೇ ಇನ್ನಿಂಗ್ಸ್​​ನಲ್ಲಿ 106ರನ್​ ಗಳಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್​ ಪ್ರತಿನಿಧಿಸಿದ್ದ ಎಂಸಿಸಿ ತಂಡ ನಾಟಿಂಗ್ಹ್ಯಾಮ್​ಶೈರ್​ ತಂಡದ ವಿರುದ್ಧ 174ರನ್​ಗಳ ಅಂತರದಲ್ಲಿ ಜಯ ದಾಖಲಿಸಿತ್ತು.

ಭಾರತ ಮತ್ತು ಬಾಂಗ್ಲಾ ನಡುವಿನ ಡೇ-ನೈಟ್ ಟೆಸ್ಟ್​ ಪಂದ್ಯ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಡೇ-ನೈಟ್ ಟೆಸ್ಟ್​ ಪಂದ್ಯದಲ್ಲಿ ಅರ್ಧ ಶತಕ ಸಿಡಿದ ಮೊದಲ ಆಟಗಾರ ಚೇತೇಶ್ವರ್ ಪುಜಾರ. ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ವಿರಾಟ್ ಕೊಹ್ಲಿ. ಭಾರತದ ಪರ 5 ವಿಕೆಟ್ ಪಡೆದ ಮೊದಲ ಆಟಗಾರ ಇಶಾಂತ್ ಶರ್ಮಾ ಎಂಬ ದಾಖಲೆ ನಿರ್ಮಾಣವಾಗಿದೆ.

Intro:Body:Conclusion:
Last Updated : Nov 24, 2019, 1:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.