ETV Bharat / sports

ದೃಷ್ಟಿ ವಿಕಲಚೇತನ ವ್ಯಕ್ತಿಯ ಆತ್ಮಚರಿತ್ರೆ 'ಐ ಓಪನರ್' ಬಿಡುಗಡೆ ಮಾಡಿದ ರಾಹುಲ್ ದ್ರಾವಿಡ್

author img

By

Published : Sep 11, 2020, 7:50 AM IST

Updated : Sep 11, 2020, 8:02 AM IST

ವಿಶ್ವ ಅಂಧ ಕ್ರಿಕೆಟ್ (ಡಬ್ಲ್ಯೂಬಿಸಿ) ಅಧ್ಯಕ್ಷ ಜಿ.ಕೆ. ಮಹಂತೇಶ್ ಅವರ ಆತ್ಮಚರಿತ್ರೆ ಐ ಓಪನರ್​(Eye Opener) ಅನ್ನು ಭಾರತ ಕ್ರಿಕೆಟ್​​​ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬಿಡುಗಡೆ ಮಾಡಿದ್ದಾರೆ.

Rahul Dravid releases Eye Opene
ಐ ಓಪನರ್ ಬಿಡುಗಡೆ ಮಾಡಿದ ರಾಹುಲ್ ದ್ರಾವಿಡ್

ಬೆಂಗಳೂರು: ಕ್ರಿಕೆಟ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷ ಮತ್ತು ವಿಶ್ವ ಅಂಧ ಕ್ರಿಕೆಟ್ (ಡಬ್ಲ್ಯೂಬಿಸಿ) ಅಧ್ಯಕ್ಷ ಜಿ.ಕೆ.ಮಹಂತೇಶ್ ಅವರ ಆತ್ಮಚರಿತ್ರೆ ಐ ಓಪನರ್​(Eye Opener)ಅನ್ನು ಭಾರತ ಕ್ರಿಕೆಟ್​​ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬಿಡುಗಡೆ ಮಾಡಿದ್ದಾರೆ.

ಹಿರಿಯ ಕ್ರಿಕೆಟ್ ಪತ್ರಕರ್ತ ಸತೀಶ್ ವಿಶ್ವನಾಥನ್ ಸಹ-ಲೇಖಕರಾಗಿದ್ದು, ‘ಐ ಓಪನರ್’ ಎಂಬ ಪುಸ್ತಕವು ದೃಷ್ಟಿ ವಿಕಲಚೇತನರಾದ ಮಹಂತೇಶ್ ಅವರ ಕಥೆಯನ್ನು ಅನುಸರಿಸುತ್ತದೆ.

rahul-dravid-releases-eye-opener-an-autobiography-of-a-visually-challenged-man-with-extraordinary-vision
ಆತ್ಮಚರಿತ್ರೆ 'ಐ ಓಪನರ್' ಬಿಡುಗಡೆ

ಅಂಧರ ಕ್ರಿಕೆಟ್‌ನೊಂದಿಗಿನ ಅವರ ಸುದೀರ್ಘ ಒಡನಾಟದ ಹೊರತಾಗಿ, ಮಹಂತೇಶ್ ಅವರು ಅಂಗವಿಕಲರಿಗಾಗಿ ಸಮರ್ಥನಂ ಟ್ರಸ್ಟ್‌ನ ಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿಯೂ ಆಗಿದ್ದಾರೆ.

ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ದ್ರಾವಿಡ್, ನೀವು ಅಸಾಧಾರಣ ದೃಷ್ಟಿಯನ್ನು ಹೊಂದಿದ್ದರೆ ಏನನ್ನಾದರು ಸಾಧಿಸಬಹುದು ಎಂಬುದಕ್ಕೆ ಇದೊಂದು ದೊಡ್ಡ ನಿದರ್ಶನವಾಗಿದೆ. ಅಂಧರ ಕ್ರಿಕೆಟ್ ಮತ್ತು ಸಮರ್ಥನಂ ಟ್ರಸ್ಟ್ ಮೂಲಕ ಮಹಂತೇಶ್ ಅನೇಕರ ಜೀವನದಲ್ಲಿ ಒಂದು ಬದಲಾವಣೆಯನ್ನು ತಂದಿದ್ದಾರೆ ಎಂದರು.

ಆತ್ಮಚರಿತ್ರೆ 'ಐ ಓಪನರ್' ಬಿಡುಗಡೆ

ದೊಡ್ಡ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವುದು ಸುಲಭ. ಆದರೆ ಬ್ಲೈಂಡ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಹೆಚ್ಚಿನ ಧೈರ್ಯ ಮತ್ತು ಸಮರ್ಪಣೆ ಅಗತ್ಯವಿರುತ್ತದೆ. ಮಹಂತೇಶ್ ಮತ್ತು ಅವರ ತಂಡವು ನಂಬಲಾಗದ ಸಾಧನೆಗಳನ್ನು ಮಾಡಿದೆ. ನಾನು ಬ್ಲೈಂಡ್ ಕ್ರಿಕೆಟ್ ವಿಶ್ವಕಪ್ ಒಂದರಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿದ್ದೆ ಮತ್ತು ಇದು ಅತ್ಯುತ್ತಮ ಆಟವಾಗಿದೆ. ಮಹಂತೇಶ್ ನಿಜವಾದ ನಾಯಕ, ಅವರು ವಿವಿಧ ಪ್ರತಿಕೂಲತೆಗಳನ್ನು ಪ್ರಚೋದಿಸಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು ಮತ್ತು ಸುತ್ತಲಿನ ಅನೇಕ ಜನರಿಗೆ ಸ್ಫೂರ್ತಿ ನೀಡಿದರು ಎಂದು ದ್ರಾವಿಡ್ ಹೆಳಿದ್ದಾರೆ.

Last Updated : Sep 11, 2020, 8:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.