ನವದೆಹಲಿ: ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ಕ್ಲೀನ್ಚಿಟ್ ನೀಡಿದೆ.
ದ್ರಾವಿಡ್ ಹಿತಾಸಕ್ತಿ ಸಂಘರ್ಷದ ಬಗ್ಗೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ಬಿಸಿಸಿಐ ನೀತಿ ಅಧಿಕಾರಿ ಡಿ.ಕೆ. ಜೈನ್, ದ್ರಾವಿಡ್ ಬಗ್ಗೆ ಕೇಳಿಬಂದ ದೂರನ್ನು ತಿರಸ್ಕರಿಸಲಾಗಿದ್ದು, ದೂರಿನಲ್ಲಿ ಹಿತಾಸಕ್ತಿ ಸಂಘರ್ಷದ ಯಾವುದೇ ಅಂಶ ಕಂಡುಬಂದಿಲ್ಲ ಎಂದಿದ್ದಾರೆ.
-
BCCI ethics officer DK Jain to ANI: Rahul Dravid (file pic) has been cleared of conflict of interest charges. pic.twitter.com/p3lyIeDOPF
— ANI (@ANI) November 14, 2019 " class="align-text-top noRightClick twitterSection" data="
">BCCI ethics officer DK Jain to ANI: Rahul Dravid (file pic) has been cleared of conflict of interest charges. pic.twitter.com/p3lyIeDOPF
— ANI (@ANI) November 14, 2019BCCI ethics officer DK Jain to ANI: Rahul Dravid (file pic) has been cleared of conflict of interest charges. pic.twitter.com/p3lyIeDOPF
— ANI (@ANI) November 14, 2019
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ದ್ರಾವಿಡ್ ವಿರುದ್ಧ ಹಿತಾಸಕ್ತಿ ಸಂಘರ್ಷದ ದೂರು ನೀಡಿದ್ದರು. ರಾಹುಲ್ ಅವರು ಇಂಡಿಯಾ ಸಿಮೆಂಟ್ಸ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ಉದ್ಯೋಗಿ, ಆದರೂ ಅವರಿಗೆ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ)ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆ ಎಂದು ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ದೂರಿನ ಸಂಬಂಧ ದ್ರಾವಿಡ್ ಅವರನ್ನು ಎರಡು ಬಾರಿ ಬಿಸಿಸಿಐನ ನೀತಿ ಸಮಿತಿ ವಿಚಾರಣೆ ಮಾಡಿತ್ತು. ಕೆಲ ದಿನಗಳ ಹಿಂದೆ ಎಲ್ಲ ವಿಚಾರಣೆ ಮುಕ್ತಾಯವಾಗಿತ್ತು. ಸದ್ಯ ಈ ಬಗ್ಗೆ ತೀರ್ಪು ನೀಡಲಾಗಿದ್ದು, ದ್ರಾವಿಡ್ ಕ್ಲೀನ್ಚಿಟ್ ಪಡೆದಿದ್ದಾರೆ.