ಗಯಾನಾ: ರಾಜಸ್ಥಾನದ ಮೂಲದ ಉದಯೋನ್ಮುಖ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಡೆಬ್ಯು ಮಾಡಿರುವ ಭಾರತದ 4ನೇ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಚಹರ್ ಆಡುವ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ. 20 ವರ್ಷ 2 ದಿನಕ್ಕೆ ಚಹರ್ ಈ ಅವಕಾಶ ಪಡೆದುಕೊಂಡಿದ್ದಾರೆ. ಈ ಹಿಂದೆ ಟಿ-20 ಕ್ರಿಕೆಟ್ಗೆ ರಿಷಭ್ ಪಂತ್ 19 ವರ್ಷ,120 ದಿನ, ಇಶಾಂತ್ ಶರ್ಮಾ 19 ವರ್ಷ 152 ದಿನ, ವಾಷಿಂಗ್ಟನ್ ಸುಂದರ್ 18 ವರ್ಷ 80 ದಿನ ಹಾಗೂ ಸುರೇಶ್ ರೈನಾ 20 ವರ್ಷ 4ದಿನಕ್ಕೆ ಡೆಬ್ಯು ಮಾಡಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿರುವ ರಾಹುಲ್ ಚಹರ್ 16 ಪಂದ್ಯಗಳಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ.
ಕಡಿಮೆ ವಯಸ್ಸಿನಲ್ಲಿ ಟಿ-20ಗೆ ಪದಾರ್ಪಣೆ
- ವಾಷಿಂಗ್ಟನ್ ಸುಂದರ್: 18 ವರ್ಷ 80 ದಿನ
- ರಿಷಭ್ ಪಂತ್ 19 ವರ್ಷ 120 ದಿನ
- ಇಶಾಂತ್ ಶರ್ಮಾ 19 ವರ್ಷ 152 ದಿನ
- ರಾಹುಲ್ ಚಹರ್ 20 ವರ್ಷ 2 ದಿನ
- ಸುರೇಶ್ ರೈನಾ 20 ವರ್ಷ 4 ದಿನ