ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ಆಲ್ರೌಂಡರ್ ರಾಹುಲ್ ತೆವಾಟಿಯಾ ರಾತ್ರೋ ರಾತ್ರಿ ದೊಡ್ಡ ಸ್ಟಾರ್ ಆಗಿದ್ದಾರೆ.
ಬ್ಯಾಟಿಂಗ್ ಬಂದ ಮೊದಲ 30 ನಿಮಿಷ ಕೆಟ್ಟ ಕಾರಣಗಳಿಂದ ಟ್ರೆಂಡಿಂಗ್ನಲ್ಲಿದ್ದ ಅವರು ಕೇವಲ ಒಂದೇ ಓವರ್ನಲ್ಲಿ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಚಿರಪರಿಚಿತರಾಗಿ ಹೋದರು. ಅದು ವಿಂಡೀಸ್ನ ಅದ್ಭುತ ಬೌಲರ್ಗಳಲ್ಲಿ ಒಬ್ಬರಾಗಿರುವ ಶೆಲ್ಡಾನ್ ಕಾಟ್ರೆಲ್ ಬಾಲ್ಗೆ 5 ಸಿಕ್ಸರ್ ಸಿಡಿಸಿ 'ಜೀರೋ ಟು ಹೀರೋ' ಆದರು. ತೆವಾಟಿಯಾ ಅವರ ಆ ಒಂದು ಇನ್ನಿಂಗ್ಸ್ನಿಂದ ಕ್ರಿಕೆಟ್ ಜಗತ್ತಿನಿಂದ ಚೆಪ್ಪಾಳೆಗಿಟ್ಟಿಸಿಕೊಂಡರು. ಜೊತೆಗೆ ಬಹುಬೇಗ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆ ಪಡೆಯುವಲ್ಲಿ ಸಫಲರಾದರು.
ರಾಹುಲ್ ಅವರು ನಂಬಲಾಸಾಧ್ಯವಾದ ಇನ್ನಿಂಗ್ಸ್ ಬಗ್ಗೆ ಅವರ ತಾಯಿಯನ್ನು ಕೇಳಿದಾಗ, "ನನ್ನ ಮಗ ಚೆನ್ನಾಗಿ ಆಡುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ. ರಾಹುಲ್ ಚಿಕ್ಕಂದಿನಿಂದಲೂ ತುಂಬಾ ಶ್ರಮವಹಿಸುತ್ತಿದ್ದಾನೆ. ಅವನು ಸೋಮವಾರ ನಡೆದ ಪಂದ್ಯದ ಆರಂಭದಲ್ಲಿ ಕಷ್ಟಪಡುತ್ತಿರುವಾಗ ಮನೆಯವರೆಲ್ಲರೂ ಒತ್ತಡದಲ್ಲಿದ್ದೆವು. ಆದರೆ ಆತ ಪಂದ್ಯದ ನಿಲುವನ್ನೇ ಬದಲಾಯಿಸಿದಾಗ ಎಲ್ಲರಿಗೂ ಸಂತೋಷವಾಯಿತು" ಎಂದು ಹೇಳಿದ್ದಾರೆ.
ತೆವಾಟಿಯಾ 1993ರಲ್ಲಿ ದೆಹಲಿಯ ಫರಿದಾಬಾದ್ನಲ್ಲಿ ಜನಿಸಿದರು. ಅವರ ತಂದೆ ವಕೀಲರಾಗಿದ್ದಾರೆ. ರಾಹುಲ್ ಬಾಲ್ಯದಿಂದಲೂ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟಪಡುತ್ತಿದ್ದರಂತೆ. ಅವರು 4 ನೇ ವಯಸ್ಸಿನಿಂದಲೇ ಕ್ರಿಕೆಟ್ ಆಟವನ್ನು ತುಂಬಾ ಇಷ್ಟಪಡುತ್ತಿದ್ದರು ಎಂದು ತಿಳಿದುಬಂದಿದೆ.
ತೆವಾಟಿಯಾ 2013-14ರ ರಣಜಿ ಆವೃತ್ತಿಯಲ್ಲಿ ಕರ್ನಾಟಕದ ವಿರುದ್ಧ ಪದಾರ್ಪಣೆ ಮಾಡಿದ್ದರು. 2016-17ರಲ್ಲಿ ವಿಜಯ್ ಹಜಾರೆ ಟ್ರೋಫಿ ಮೂಲಕ ಲಿಸ್ಟ್ ಎ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದರು.
2019 ರ ಐಪಿಎಲ್ ಸಮಯದಲ್ಲಿ, ಐಪಿಎಲ್ ಇತಿಹಾಸದಲ್ಲೇ ವಿಕೆಟ್ ಕೀಪರ್ ಹೊರೆತುಪಡಿಸಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಜಂಟಿ ದಾಖಲೆಯನ್ನು ನಿರ್ಮಿಸಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡಿದ್ದರು. 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ ತಂಡ ರಾಜಸ್ಥಾನ್ ರಾಯಲ್ಸ್‌ಗೆ ಇವರನ್ನು ವರ್ಗಾಯಿಸಿ, ಅಜಿಂಕ್ಯಾ ರಹಾನೆಯನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿತ್ತು.
ದೆಹಲಿ ತಂಡ 2013ರ ರಣಜಿ ಟ್ರೋಫಿ ಗೆದ್ದ ಮೇಲೆ ತೆವಾಟಿಯಾ ಐಪಿಎಲ್ ಓನರ್ಗಳನ್ನು ಆಕರ್ಷಿಸಲು ಯಶಸ್ವಿಯಾದರು. ಅವರನ್ನು ರಾಜಸ್ಥಾನ್ ರಾಯಲ್ಸ್ 2014ರಲ್ಲಿ ಮೂಲ ಬೆಲೆ 10 ಲಕ್ಷಕ್ಕೆ ಖರೀದಿಸಿತ್ತು. ನಂತರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ ಆಟ ನೋಡಿ 2017 ಹರಾಜಿನಲ್ಲಿ ಪಂಜಾಬ್ ತಂಡ 25 ಲಕ್ಷ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.
-
THIRTY!!!!!!#RRvKXIP | #HallaBol | #RoyalsFamily | @rahultewatia02 pic.twitter.com/wOB5lZerMt
— Rajasthan Royals (@rajasthanroyals) September 27, 2020 " class="align-text-top noRightClick twitterSection" data="
">THIRTY!!!!!!#RRvKXIP | #HallaBol | #RoyalsFamily | @rahultewatia02 pic.twitter.com/wOB5lZerMt
— Rajasthan Royals (@rajasthanroyals) September 27, 2020THIRTY!!!!!!#RRvKXIP | #HallaBol | #RoyalsFamily | @rahultewatia02 pic.twitter.com/wOB5lZerMt
— Rajasthan Royals (@rajasthanroyals) September 27, 2020
ರಾಹುಲ್ ಪಂಜಾಬ್ ಪರ ಪದಾರ್ಪಣೆ ಪಂದ್ಯದಲ್ಲಿ 3 ಓವರ್ಗಳಲ್ಲಿ 2 ವಿಕೆಟ್ ಹಾಗೂ 8 ಎಸೆತಗಳಲ್ಲಿ 15 ರನ್ ಗಳಿಸಿ ಗಮನ ಸೆಳೆದಿದ್ದರು. 2018 ರಲ್ಲಿ ಅವರ ಮೂಲ ಬೆಲೆ 2.5 ಕೋಟಿ ರೂಗೆ ನಿಗದಿಯಾಗಿತ್ತು. ಆದರೆ ಡೆಲ್ಲಿ ಮೂರು ಕೋಟಿ ರೂ. ನೀಡಿ ಖರೀದಿಸಿತ್ತು. 2019ರ ನವೆಂಬರ್ನಲ್ಲಿ ಆಟಗಾರರ ವರ್ಗಾವಣೆ ನೀತಿಯಲ್ಲಿ ರಹಾನೆಯನ್ನು ತಂಡಕ್ಕೆ ಸೇರಿಸಿಕೊಂಡು ತೆವಾಟಿಯಾ ಸೇರಿದಂತೆ ಮೂವರು ಆಟಗಾರರನ್ನು ರಾಯಲ್ಸ್‌ಗೆ ಬಿಟ್ಟುಕೊಟ್ಟಿತ್ತು. ಇದೀಗ ರಾಯಲ್ಸ್ ತಂಡದಲ್ಲಿ ತೆವಾಟಿಯಾ ತಮ್ಮ ಒಂದೇ ಇನ್ನಿಂಗ್ಸ್ನಿಂದ ದೊಡ್ಡ ಸ್ಟಾರ್ ಆಗಿ ಮಿನುಗುತ್ತಿದ್ದಾರೆ.
-
BTS of '666606' 🎥#HallaBol | #RoyalsFamily | @rahultewatia02 pic.twitter.com/AG9HeWnM8X
— Rajasthan Royals (@rajasthanroyals) September 28, 2020 " class="align-text-top noRightClick twitterSection" data="
">BTS of '666606' 🎥#HallaBol | #RoyalsFamily | @rahultewatia02 pic.twitter.com/AG9HeWnM8X
— Rajasthan Royals (@rajasthanroyals) September 28, 2020BTS of '666606' 🎥#HallaBol | #RoyalsFamily | @rahultewatia02 pic.twitter.com/AG9HeWnM8X
— Rajasthan Royals (@rajasthanroyals) September 28, 2020
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವಿನ ಆಟ ಪ್ರದರ್ಶಿಸುವುದರ ಜೊತೆಗೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. 2013ರ ಐಪಿಎಲ್ನಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಕೂಡ 5 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು.
-
And how the floodgates opened! 😅#RRvKXIP | #HallaBol | #RoyalsFamily | #Dream11IPL | @rahultewatia02 pic.twitter.com/Jp6QjooBEQ
— Rajasthan Royals (@rajasthanroyals) September 28, 2020 " class="align-text-top noRightClick twitterSection" data="
">And how the floodgates opened! 😅#RRvKXIP | #HallaBol | #RoyalsFamily | #Dream11IPL | @rahultewatia02 pic.twitter.com/Jp6QjooBEQ
— Rajasthan Royals (@rajasthanroyals) September 28, 2020And how the floodgates opened! 😅#RRvKXIP | #HallaBol | #RoyalsFamily | #Dream11IPL | @rahultewatia02 pic.twitter.com/Jp6QjooBEQ
— Rajasthan Royals (@rajasthanroyals) September 28, 2020