ದುಬೈ: ಕ್ವಿಂಟನ್ ಡಿಕಾಕ್ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ 176 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮುಂಬೈ ಪವರ್ಪ್ಲೇ ಮುಗಿಯುವುದರೊಳಗೆ ನಾಯಕ ರೋಹಿತ್ ಶರ್ಮಾ(9) ಸೂರ್ಯಕುಮಾರ್ ಯಾದವ್(0) ಹಾಗೂ ಇಶಾನ್ ಕಿಶನ್(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಈ ಸಂದರ್ಭದಲ್ಲಿ ಡಿಕಾಕ್ ಜೊತೆಗೂಡಿದ ಕೃನಾಲ್ ಪಾಂಡ್ಯ (34) 4ನೇ ವಿಕೆಟ್ಗೆ 58 ರನ್ ಸೇರಿಸಿ ಚೇತರಿಕೆ ನೀಡಿದರು. ಕೃನಾಲ್ ರಿ ಬಿಷ್ಣೋಯ್ ಓವರ್ನಲ್ಲಿ ಔಟಾಗುತ್ತಿದ್ದಂತೆ ಬಂದ ಹಾರ್ದಿಕ್ ಪಾಂಡ್ಯ ಕೇವಲ 8 ರನ್ಗಳಿಸಿ ಔಟಾದರು. ಡಿಕಾಕ್ 43 ಎಸೆತಗಳಲ್ಲಿ ತಲಾ 3 ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ 53 ರನ್ಗಳಿಸಿದರು.
-
Innings Break!
— IndianPremierLeague (@IPL) October 18, 2020 " class="align-text-top noRightClick twitterSection" data="
A fantastic flourish for MI at the end there. An unbeaten 57-run partnership between Pollard and NCN propel #MumbaiIndians to a total of 176/6 on the board.
Will #KXIP chase this down?#Dream11IPL pic.twitter.com/UWJ59NBTyR
">Innings Break!
— IndianPremierLeague (@IPL) October 18, 2020
A fantastic flourish for MI at the end there. An unbeaten 57-run partnership between Pollard and NCN propel #MumbaiIndians to a total of 176/6 on the board.
Will #KXIP chase this down?#Dream11IPL pic.twitter.com/UWJ59NBTyRInnings Break!
— IndianPremierLeague (@IPL) October 18, 2020
A fantastic flourish for MI at the end there. An unbeaten 57-run partnership between Pollard and NCN propel #MumbaiIndians to a total of 176/6 on the board.
Will #KXIP chase this down?#Dream11IPL pic.twitter.com/UWJ59NBTyR
ಕೊನೆಯ 3 ಓವರ್ನಲ್ಲಿ ಅಬ್ಬರಿಸಿದ ಪೊಲಾರ್ಡ್ ಹಾಗೂ ಕೌಲ್ಟರ್ ನೈಲ್ 21 ಎಸೆತಗಳಲ್ಲಿ 57 ರನ್ ಸೂರೆಗೈದರು. ನೈಲ್ 12 ಎಸೆತಗಳಲ್ಲಿ 4 ಬೌಂಡರಿ ಸಹಿತ 24 ರನ್ಗಳಿಸಿದರೆ, ಪೊಲಾರ್ಡ್ 12 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 34 ರನ್ಸಿಡಿಸಿದರು.
ಒಟ್ಟಾರೆ ಮುಂಬೈ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ಗಳಿಸಿತು.
ಮೊಹಮ್ಮದ್ ಶಮಿ 2 ವಿಕೆಟ್, ಅರ್ಶ್ದೀಪ್ ಸಿಂಗ್ 2, ಜೋರ್ಡಾನ್ ಮತ್ತು ರವಿ ಬಿಷ್ಣೋಯ್ ತಲಾ ಒಂದೊಂದು ವಿಕೆಟ್ ಪಡೆದರು.