ಸಿಡ್ನಿ: ಡಿಸೆಂಬರ್ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಸಿಡಿಸಿದ ಶತಕ ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಹೇಳಿದ್ದಾರೆ.
ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಫಿಟ್‌ನೆಸ್ ಮತ್ತು ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಪಂತ್, ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ 73 ಎಸೆತಗಳಲ್ಲಿ 103 ರನ್ ಗಳಿಸುವ ಮೂಲಕ ಭಾರತೀಯ ತಂಡದ ಮ್ಯಾನೇಜ್ಮೆಂಟ್ಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಸಂದಿಗ್ಧತೆಯನ್ನು ಸೃಷ್ಟಿಸಿದ್ದಾರೆ.
-
🎤 INTERVIEW 🎤: "This 💯 has been a confidence booster for me." 🔝🔥
— BCCI (@BCCI) December 14, 2020 " class="align-text-top noRightClick twitterSection" data="
Watch @RishabhPant17 reflect on his & #TeamIndia's performance in the pink-ball tour game against Australia A - by @Moulinparikh
Full interview 📽️👉 https://t.co/kwfLCMuHDp pic.twitter.com/Owme4y1qhx
">🎤 INTERVIEW 🎤: "This 💯 has been a confidence booster for me." 🔝🔥
— BCCI (@BCCI) December 14, 2020
Watch @RishabhPant17 reflect on his & #TeamIndia's performance in the pink-ball tour game against Australia A - by @Moulinparikh
Full interview 📽️👉 https://t.co/kwfLCMuHDp pic.twitter.com/Owme4y1qhx🎤 INTERVIEW 🎤: "This 💯 has been a confidence booster for me." 🔝🔥
— BCCI (@BCCI) December 14, 2020
Watch @RishabhPant17 reflect on his & #TeamIndia's performance in the pink-ball tour game against Australia A - by @Moulinparikh
Full interview 📽️👉 https://t.co/kwfLCMuHDp pic.twitter.com/Owme4y1qhx
ಗುರುವಾರದಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಪಂತ್ ಮತ್ತು ವೃದ್ಧಿಮಾನ್ ಸಹಾ ನಡುವೆ ಸ್ಪರ್ಧೆ ಇದ್ದು, ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಕಾಡುತ್ತಿದೆ.
"ನಾನು ಬ್ಯಾಟಿಂಗ್ ಮಾಡಲು ಹೊರಟಾಗ ಸಾಕಷ್ಟು ಓವರ್‌ಗಳು ಉಳಿದಿದ್ದವು, ಆದ್ದರಿಂದ ಹನುಮ ವಿಹಾರಿ ಮತ್ತು ನಾನು ಉತ್ತಮ ಜೊತೆಯಾಟ ಆಡಿದ್ವಿ. ನಾವು ಸಾಧ್ಯವಾದಷ್ಟು ಬ್ಯಾಟಿಂಗ್ ಮಾಡಲು ಬಯಸಿದ್ದೆವು. ನಿಧಾನವಾಗಿ ನಾನು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪ್ರಾರಂಭಿಸಿದೆ" ಎಂದು ಪಂತ್ ಬಿಸಿಸಿಐ ಅಧಿಕೃತ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
"ಈ ಶತಕ ನನಗೆ ದೊಡ್ಡ ಆತ್ಮವಿಶ್ವಾಸ ಹೆಚ್ಚಿಸಿದೆ. ಕುತ್ತಿಗೆ ನೋವಿನ ಕಾರಣದಿಂದ ಮೊದಲ ಅಭ್ಯಾಸ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿಲ್ಲ" ಎಂದು ಪಂತ್ ಹೇಳಿದ್ದಾರೆ.