ETV Bharat / sports

ರಣಜಿ ಟ್ರೋಫಿ: ಕರ್ನಾಟಕ ಬೌಲರ್​ಗಳನ್ನು ಕಾಡಿದ ಪೂಜಾರ.... 162 ರನ್​ಗಳಿಸಿ ನಾಟೌಟ್

ರಾಜ್​ಕೋಟ್​ನ ಮಾಧವ್​ರಾವ್​ ಸಿಂಧ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಪಂದ್ಯದಲ್ಲಿ ಪೂಜಾರ ಹಾಗೂ ಶೆಲ್ಡಾನ್​ ಜಾಕ್ಸನ್​ ಶತಕದ ನೆರವಿನಿಂದ ಸೌರಾಷ್ಟ್ರ 90 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 296ರನ್​ಗಳಿಸಿದೆ.

Pujara unbeaten ton
Pujara unbeaten ton
author img

By

Published : Jan 11, 2020, 5:14 PM IST

ರಾಜ್​ಕೋಟ್​: ಭಾರತ ತಂಡದ ಸ್ಟಾರ್​ ಟೆಸ್ಟ್​ ಬ್ಯಾಟ್ಸ್​ಮನ್​ ಚೇತೇಶ್ವರ್​ ಪೂಜಾರ ಭರ್ಜರಿ ಶತಕ ದಾಖಲಿಸಿ ಕರ್ನಾಟಕದ ಬೌಲರ್​ಗಳ ಬೆವರಿಳಿಸಿದ್ದಾರೆ.

ರಾಜ್​ಕೋಟ್​ನ ಮಾಧವ್​ರಾವ್​ ಸಿಂಧ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಪಂದ್ಯದಲ್ಲಿ ಪೂಜಾರ ಹಾಗೂ ಶೆಲ್ಡಾನ್​ ಜಾಕ್ಸನ್​ ಶತಕದ ನೆರವಿನಿಂದ ಸೌರಾಷ್ಟ್ರ 90 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 296ರನ್​ಗಳಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಸೌರಾಷ್ಟ್ರಕ್ಕೆ ಜಗದೀಶ್​ ಸುಚಿತ್​ ಆರಂಭದಲ್ಲೇ ಆಘಾತ ನೀಡಿದರು. ಆರಂಭಿಕರಾದ ಕಣಕ್ಕಿಳಿದಿದ್ದ ಹಾರ್ವಿಕ್​ ದೇಸಾಯಿ(13) ಹಾಗೂ ಸ್ನೆಲ್​ ಪಾಟೇಲ್(16) ​ ಅವರನ್ನು ಬೇಗನೆ ಔಟ್​ ಮಾಡುವ ಮೂಲಕ ಕರ್ನಾಟಕ ತಂಡಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು.

ಕರ್ನಾಟಕ ಬೌಲರ್​ಗಳ ಹೈರಾಣಗೊಳಿಸಿದ ಪೂಜಾರ-ಜಾಕ್ಸನ್​

ಕೇವಲ 33 ಕ್ಕೆ 2 ವಿಕೆಟ್​ ಕಳೆದುಕೊಂಡಿದ್ದ ಸೌರಾಷ್ಟ್ರ ತಂಡಕ್ಕೆ ಭಾರತ ತಂಡ ಪ್ರತಿನಿಧಿಸುವ ಚೇತೇಶ್ವರ್​ ಪೂಜಾರ(162) ಹಾಗೂ ಶೆಲ್ಡಾನ್​ ಜಾಕ್ಸನ್​( 99) ಮೂರನೇ ದ್ವಿಶತಕದ ಜೊತೆಯಾಟ ನಡೆಸಿ ಕರ್ನಾಟಕ ಬೌಲರ್​ಗಳನ್ನು ದಿನವೆಲ್ಲಾ ಕಾಡಿದರು. ಇವರಿಬ್ಬರು ಮುರಿಯ ದ 3ನೇ ವಿಕೆಟ್​ ಜೊತೆಯಾಟಕ್ಕೆ 263 ರನ್​ಗಳಿಸಿದರು.

238 ಎಸೆತಗಳನ್ನೆದುರಿಸಿದ ಪೂಜಾರ 17 ಬೌಂಡರಿ ಒಂದು ಸಿಕ್ಸರ್​ ಸಿಡಿಸಿದರೆ, ಶೆಲ್ಡಾನ್ ಜಾಕ್ಸನ್​ 191 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 99 ರನ್​ಗಳಿಸಿ 2ನೇ ದಿನಕ್ಕೆ ತಮ್ಮ ಆಟ ಕಾಯ್ದಿರಿಸಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.