ಕರಾಚಿ : ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರ ಕೊರೊನಾ ಪರೀಕ್ಷೆ ಫಲಿತಾಂಶ ಇದೀಗ ಮತ್ತೊಮ್ಮೆ ಪಾಸಿಟಿವ್ ಬಂದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮೊದಲ ಭಾರಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ನಂತರ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಇದೀಗ ಮತ್ತೆ ಪಾಸಿಟಿವ್ ಬಂದಿದೆ. ಈ ಮೂಲಕ ಹಫೀಜ್ ಕೊರೊನಾ ಪರೀಕ್ಷಾ ಫಲಿತಾಂಶಗಳ ಸುತ್ತಲಿನ ರಹಸ್ಯ ಮುಂದುವರೆದಿದೆ. ಇದರ ಜೊತೆಗೆ ಕ್ಯಾರಂಟೈನ್ ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವುದರಿಂದ ಆಟಗಾರನ ವಿರುದ್ಧ ಪಿಸಿಬಿ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.
![Hafeez found COVID-19 +ve in PCB test](https://etvbharatimages.akamaized.net/etvbharat/prod-images/mohammad-hafeez_2706newsroom_1593227859_947.jpg)
ಭಾನುವಾರ ಪಾಕ್ ಆಟಗಾರರು ಇಂಗ್ಲೆಂಡ್ಗೆ ತೆರಳಲಿರುವ ಹಿನ್ನೆಲೆ ನಡೆಸಿದ ಕೋವಿಡ್ ಟೆಸ್ಟ್ನಲ್ಲಿ ಹಫೀಜ್ಗೆ ಪಾಸಿಟಿವ್ ಇರುವುದು ಧೃಡಪಟ್ಟಿದೆ. ಹಫೀಜ್ ಅವರ ಜೊತೆ 9 ಆಟಗಾರರು ಮತ್ತು ಒಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
![Hafeez found COVID-19 +ve in PCB test](https://etvbharatimages.akamaized.net/etvbharat/prod-images/pakistan_cricket_board_logo_2706newsroom_1593227859_365.jpg)
ಕೊರೊನಾ ಪರೀಕ್ಷೆ ನಂತರ ಕ್ವಾರಂಟೈನ್ಗೆ ಹೋಗುವ ಬದಲು ಹಫೀಜ್ ಅವರು ಶನಿವಾರ ಮತ್ತೆ ಕೋವಿಡ್ ಟೆಸ್ಟ್ಗೆ ಒಳಗಾದರೆ ಕ್ರಿಕೆಟ್ ಮಂಡಳಿಯಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.