ETV Bharat / sports

ಕಿವೀಸ್-ವಿಂಡೀಸ್ ಟಿ20, ಟೆಸ್ಟ್ ಸರಣಿ: ಪೂರನ್, ರೋಸ್ಟನ್ ಚೇಸ್ ಉಪನಾಯಕರಾಗಿ ಆಯ್ಕೆ - ರೋಸ್ಟನ್ ಚೇಸ್ ಲೇಟೆಸ್ಟ್ ನ್ಯೂಸ್

ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೆ ವಿಂಡೀಸ್ ತಂಡದ ಉಪನಾಯಕನಾಗಿ ನಿಕೋಲಸ್ ಪೂರನ್ ಆಯ್ಕೆಯಾಗಿದ್ರೆ, ಟೆಸ್ಟ್ ತಂಡದ ಉಪನಾಯಕನಾಗಿ ರೋಸ್ಟನ್ ಚೇಸ್ ಆಯ್ಕೆಯಾಗಿದ್ದಾರೆ.

Pooran, Chase named Windies vice-captains for New Zealand tour
ಪೂರನ್, ರೋಸ್ಟನ್ ಚೇಸ್ ಉಪನಾಯಕರಾಗಿ ಆಯ್ಕೆ
author img

By

Published : Nov 12, 2020, 1:02 PM IST

ಸೇಂಟ್ ಜಾನ್ಸ್: ನ್ಯೂಜಿಲೆಂಡ್ ವಿರುದ್ಧದ ಟಿ-20 ಮತ್ತು ಟೆಸ್ಟ್ ಸರಣಿಗೆ ನಿಕೊಲಸ್ ಪೂರನ್ ಮತ್ತು ರೋಸ್ಟನ್ ಚೇಸ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಟಿಸಿದೆ.

ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೀನ್ ಪೊಲಾರ್ಡ್ ತಂಡವನ್ನು ಮುನ್ನಡೆಸಿದರೆ, ಜೇಸನ್ ಹೋಲ್ಡರ್ ಎರಡು ಟೆಸ್ಟ್ ಪಂದ್ಯಗಳಲ್ಲಿ ನಾಯಕನ ಕರ್ತವ್ಯ ನಿರ್ವಹಿಸಲಿದ್ದಾರೆ.

Chase named Windies vice-captain
ರೋಸ್ಟನ್ ಚೇಸ್

"ನ್ಯೂಜಿಲೆಂಡ್ ಪ್ರವಾಸಕ್ಕಾಗಿ ರೋಸ್ಟನ್ ಚೇಸ್ ಅವರನ್ನು ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಅವರು ಒಬ್ಬ ಅನುಭವಿ ಆಟಗಾರನಾಗಿದ್ದು, ಸಹ ಆಟಗಾರರಿಗೆ ಸಲಹೆ ನೀಡಲು ಮತ್ತು ಚರ್ಚಿಸಲು ಸಿದ್ಧರಿದ್ದಾರೆ. ಸಹ ಆಟಗಾರರು ಮತ್ತು ತರಬೇತುದಾರರೊಂದಿಗಿನ ವಿಚಾರಗಳು, ಮೈದಾನದಲ್ಲಿ ಮತ್ತು ಹೊರಗೆ ನಾಯಕ ಜೇಸನ್ ಹೋಲ್ಡರ್‌ಗೆ ಉತ್ತಮ ನಾಯಕತ್ವದ ಬೆಂಬಲವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್​ನ ಪ್ರಮುಖ ಆಯ್ಕೆದಾರ ರೋಜರ್ ಹಾರ್ಪರ್ ಹೇಳಿದರು.

"ನಿಕೊಲಸ್ ಪೂರನ್ ನ್ಯೂಜಿಲೆಂಡ್ ಪ್ರವಾಸದ ವೇಳೆ ಟಿ-20 ತಂಡದ ಉಪನಾಯಕನ ಪಾತ್ರದಲ್ಲಿ ಮುಂದುವರೆದಿದ್ದಾರೆ. 2019 ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಯ ವೇಳೆ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು" ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಟಿ-20 ತಂಡ: ಕೀರನ್ ಪೊಲಾರ್ಡ್(ನಾಯಕ), ನಿಕೊಲಸ್ ಪೂರನ್(ಉಪ ನಾಯಕ) ಫಾಬಿಯಾನ್ ಅಲೆನ್, ಶೆಲ್ಡನ್ ಕಾಟ್ರೆಲ್, ಆಂಡ್ರೆ ಫ್ಲೆಚರ್, ಶಿಮ್ರಾನ್ ಹೆಟ್ಮಾಯರ್, ಬ್ರಂಡನ್ ಕಿಂಗ್, ಕಲಿ ಮೆಯರ್ಸ್, ರೊವ್ಮನ್ ಪೊವೆಲ್, ಕೀಮೋ ಪಾಲ್, ರೊಮಾರಿಯೊ ಶೆಫರ್ಡ್, ಒಶಾನೆ ಥಾಮಸ್, ಹೇಡನ್ ವಾಲ್ಶ್ ಜ್ಯೂನಿಯರ್, ಕೆಸ್ರಿಕ್ ವಿಲಿಯಮ್ಸ್.

ಟೆಸ್ಟ್ ತಂಡ: ಜಾಸನ ಹೋಲ್ಡರ್ (ನಾಯಕ), ರೊಸ್ಟನ್ ಚೇಸ್ (ಉಪ ನಾಯಕ), ಜೆರ್ಮೈನ್ ಬ್ಲಾಕ್ ವುಡ್, ಕ್ರೆಗ್ ಬ್ರಥ್ ವೈಟ್, ಡರೆನ್ ಬ್ರಾವೊ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್ ಬೆಲ್, ರಹ್ಕೀಮ್ ಕಾರ್ ನ್ವೆಲ್, ಅಲ್ಜರಿ ಜೋಸೆಫ್, ಕೀಮೋ ಪಾಲ್, ಕೆಮಾರ್ ರೋಚ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.