ETV Bharat / sports

ಕ್ವಾಲಿಫೈಯರ್ ಪಂದ್ಯದಲ್ಲಿ ಪೃಥ್ವಿ ಶಾ ಬದಲಿಗೆ ಹೊಸ ಓಪನರ್​ ಕಣ್ಕಕಿಳಿಸಲು ಡೆಲ್ಲಿ ಚಿಂತನೆ

author img

By

Published : Nov 7, 2020, 5:05 PM IST

ಪೃಥ್ವಿ ಶಾ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಕಳೆದ 8 ಪಂದ್ಯಗಳಲ್ಲಿ 3 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಹಾಗಾಗಿ ಭಾನುವಾರದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಪೃಥ್ವಿ ಶಾ
ಪೃಥ್ವಿ ಶಾ

ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್​ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಯುವ ಬ್ಯಾಟ್ಸ್​ಮನ್​ ಪೃಥ್ವಿ ಶಾ ಅವರನ್ನು ಮುಂದಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಡ್ರಾಪ್ ಮಾಡಿ ಹೊಸ ಆರಂಭಿಕ ಆಟಗಾರನನ್ನು ಕಣಕ್ಕಿಳಿಸಲು ಡೆಲ್ಲಿ ಕ್ಯಾಪಿಟಲ್ಸ್​ ಚಿಂತಿಸುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

13ನೇ ಆವೃತ್ತಿಯಲ್ಲಿ 13 ಪಂದ್ಯಗಳಿಂದ ಪೃಥ್ವಿ ಶಾ ಕೇವಲ 228 ರನ್ ​ಗಳಿಸಿದ್ದಾರೆ. ಅದರಲ್ಲೂ ಕಳೆದ 8 ಇನ್ನಿಂಗ್ಸ್​ಗಳಲ್ಲಿ ಅವರ ಗರಿಷ್ಠ ಸ್ಕೋರ್ ಕೇವಲ 19 ರನ್​ ಆಗಿದೆ. ಸತತ ವೈಫಲ್ಯ ಅನುಭವಿಸಿರುವ ಅವರನ್ನು ಮುಂದಿನ ನಿರ್ಣಾಯಕ ಪಂದ್ಯದಲ್ಲಿ ಆಡಿಸುವ ತಾಳ್ಮೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿ ಹೊಂದಿಲ್ಲ ಎಂದು ತಿಳಿದು ಬಂದಿದೆ.

ಪೃಥ್ವಿ ಶಾ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಕಳೆದ 8 ಪಂದ್ಯಗಳಲ್ಲಿ 3 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಹಾಗಾಗಿ ಭಾನುವಾರದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಮಾರ್ಕಸ್​ ಸ್ಟೋಯ್ನಿಸ್​
ಮಾರ್ಕಸ್​ ಸ್ಟೋಯ್ನಿಸ್​

ಆದರೆ ಪೃಥ್ವಿ ಶಾ ಸ್ಥಾನಕ್ಕೆ ಸರಿಹೊಂದುವ ಆರಂಭಿಕ ಆಟಗಾರರನ್ನು ಡೆಲ್ಲಿ ಹೊಂದಿಲ್ಲ. ಈಗಾಗಲೇ ಒಂದೆರಡು ಪಂದ್ಯಗಳಲ್ಲಿ ರಹಾನೆ ಅವರನ್ನ ಕಣಕ್ಕಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಗ್​ಬ್ಯಾಶ್​ನಲ್ಲಿ ಆರಂಭಿಕನಾಗಿ ಅನುಭವ ಹೊಂದಿರುವ ಮಾರ್ಕಸ್​ ಸ್ಟೋಯ್ನಿಸ್​ರನ್ನು ಆರಂಭಿಕನಾಗಿ ಇಳಿಸಲು ಕ್ಯಾಪಿಟಲ್ಸ್​ ಆಲೋಚಿಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈಗಾಗಲೇ ಧವನ್​ 15 ಪಂದ್ಯಗಳಿಂದ 535 ರನ್​ ಳಿಸಿ ಉತ್ತಮ ಫಾರ್ಮ್​ನಲ್ಲಿದ್ದರೆ, ಸ್ಟೋಯ್ನಿಸ್​ 15 ಪಂದ್ಯಗಳಿಂದ 150ರ ಸ್ಟ್ರೈಕ್​ ರೇಟ್​ನಲ್ಲಿ 345 ರನ್​ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಕೂಡ ಸೇರಿವೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಈ ಜೋಡಿ ಕಣಕ್ಕಿಳಿದರೆ ಯಾವುದೇ ಆಶ್ಚರ್ಯವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.