ವಿಶ್ವವನ್ನೇ ಬೆಚ್ಚಬೀಳಿಸಿರುವ ಕೊರೊನಾ ವೈರಸ್ ವಿರುದ್ಧ ಅನೇಕ ರಾಷ್ಟ್ರಗಳು ಹೋರಾಟ ನಡೆಸಿವೆ. ಭಾರತದಲ್ಲಿ ಸಹ 21 ದಿನಗಳ ಲಾಕ್ಡೌನ್ನನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್-19 ಹರಡುವಿಕೆ ತೆಗಟ್ಟಬೇಕಿದೆ.
ಈ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಹಲವಾರು ರೀತಿ ಪ್ರಯತ್ನಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವ ಸಲುವಾಗಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಡ್ಮಿಂಟನ್ ತಾರೆ ಪಿ ವಿ ಸಿಂಧೂ, ವಿಶ್ವನಾಥನ್ ಆನಂದ್, ಮೇರಿ ಕೋಮ್ ಮತ್ತು ಭಜರಂಗ್ ಪುನಿಯಾ ಸೇರಿ 49 ಪ್ರಮುಖ ಕ್ರೀಡಾ ವ್ಯಕ್ತಿಗಳ ಜೊತೆ ಮಾತನಾಡಿದ್ದಾರೆ.
-
Interacted with sportspersons via video conferencing on the situation arising due to COVID-19. Sports requires self-discipline, tenacity, teamwork and a fighting spirit. These are also required to defeat Coronavirus. #IndiaFightsCorona https://t.co/OuWHisdaVX
— Narendra Modi (@narendramodi) April 3, 2020 " class="align-text-top noRightClick twitterSection" data="
">Interacted with sportspersons via video conferencing on the situation arising due to COVID-19. Sports requires self-discipline, tenacity, teamwork and a fighting spirit. These are also required to defeat Coronavirus. #IndiaFightsCorona https://t.co/OuWHisdaVX
— Narendra Modi (@narendramodi) April 3, 2020Interacted with sportspersons via video conferencing on the situation arising due to COVID-19. Sports requires self-discipline, tenacity, teamwork and a fighting spirit. These are also required to defeat Coronavirus. #IndiaFightsCorona https://t.co/OuWHisdaVX
— Narendra Modi (@narendramodi) April 3, 2020
ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ರೀಡಾಪಟುಗಳ ಜತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜಾಲತಾಣಗಳಲ್ಲಿ ಸಕ್ರಿಯವಾಗಿ ವಿಡಿಯೋಗಳ ಮುಖಾಂತರ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು. ದೇಶದ ಪ್ರತಿಯೊಬ್ಬ ನಾಗರಿಕನಿಗೆ ಕೊರೊನಾ ವೈರಸ್ ಅರಿವು ಮೂಡಿಸುವ ವಿಧಾನಗಳ ಬಗ್ಗೆ ಮೋದಿ ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಿದರು.
ಜನರಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಸಂದೇಶ ನೀಡಬೇಕು. ಕೊರೊನಾ ಜಾಗೃತಿಯಲ್ಲಿ ಆಟಗಾರರು ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು. ಇದು ಒಗ್ಗಟ್ಟಿನಿಂದ ಹೋರಾಡಬೇಕಾದ ಹೋರಾಟ. ಜನರನ್ನು ತಲುಪಲು ಕ್ರೀಡಾಪಟುಗಳು ಉತ್ತಮ ಮಾರ್ಗ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.