ಮುಂಬೈ: ಐಪಿಎಲ್ನಲ್ಲಿ ಇಂಗ್ಲೆಂಡ್ ಆಟಗಾರರು ಹೆಚ್ಚಾಗಿ ಭಾಗವಹಿಸುವುದರಿಂದ ಇಲ್ಲಿ ಪರಿಸ್ಥಿತಿಗೆ ಒಗ್ಗಿಗೊಳ್ಳಬಹುದು. ಇದರಿಂದ ಇದೇ ವರ್ಷದಲ್ಲಿ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ಅನುಕೂಲವಾಗಲಿದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುವ ಇಂಗ್ಲಿಷ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ನಗದು ಸಮೃದ್ಧ ಲೀಗ್ನಲ್ಲಿ ಇಂಗ್ಲಿಷ್ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. 2021 ಆವೃತ್ತಿಯಲ್ಲಿ 14 ಆಟಗಾರರು ಐಪಿಎಲ್ ಒಪ್ಪಂದ ಹೊಂದಿದ್ದಾರೆ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಜೋಶ್ ಬಟ್ಲರ್, ಬೈರ್ಸ್ಟೋವ್, ಜೇಸನ್ ರಾಯ್, ಕರ್ರನ್ ಬ್ರದರ್ಶ್, ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಡೇವಿಡ್ ಮಲನ್ ಆಡಲಿದ್ದಾರೆ.
ಈ ಕುರಿತು ಮಾತನಾಡಿರುವ ಸ್ಟೋಕ್ಸ್, ಹೌದು, ಕಳೆದ 5 ವರ್ಷಗಳಿಂದ ಐಪಿಎಲ್ನಲ್ಲಿ ನಮ್ಮ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಕೈ ಸ್ಪೋರ್ಟ್ಸ್ಗೆ ಹೇಳಿದ್ದಾರೆ.
ಈ ಟೂರ್ನಿ ಕೇವಲ ವೈಯಕ್ತಿಕವಾಗಿ ಮಾತ್ರವಲ್ಲದೆ, ಇಂಗ್ಲೆಂಡ್ ತಂಡದ ಭಾಗವಾಗಲಿರುವ ಆಟಗಾರರಿಗೂ ಅದ್ಭುತವಾಗಿದೆ. ಇದು ವಿಶ್ವದ ಅತ್ಯುನ್ನತ ಸ್ಪರ್ಧೆಯ ಅನುಭವವನ್ನು ನೀಡುತ್ತದೆ. ಅಷ್ಟೇ ಅಲ್ಲದೆ , ಇಲ್ಲಿ ನೀವು ನಿರಂತರವಾಗಿ ಪ್ರದರ್ಶನ ನೀಡುವ ಒತ್ತಡದಲ್ಲಿರುತ್ತೀರಿ ಎಂದು ರಾಯಲ್ಸ್ ಆಲ್ರೌಂಡರ್ ತಿಳಿಸಿದ್ದಾರೆ.
ಈ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ, ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದಕ್ಕೆ ಇಂಗ್ಲೆಂಡ್ ಆಟಗಾರರಿಗೆ ಅತ್ಯುತ್ತಮ ಅವಕಾಶ. ಇಲ್ಲಿ ನಿರಂತರವಾಗಿ ಆಡುವುದರಿಂದ ಇಂಗ್ಲೆಂಡ್ ತಂಡಕ್ಕೆ ಬಹುದೊಡ್ಡ ಅನುಕೂಲವಾಗಲಿದೆ ಎಂದು ಸ್ಟೋಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಕಾರು ಗಿಫ್ಟ್ ಕೊಟ್ಟ ಮಹೀಂದ್ರಾಗೆ ಕ್ರಿಕೆಟರ್ ನಟರಾಜನ್ ಕೃತಜ್ಞತೆ ಅರ್ಪಿಸಿದ್ದು ಹೀಗೆ!