ಲಾಹೋರ್: ಭ್ರಷ್ಟಾಚಾರ ವಿರೋಧಿ ಕಾಯ್ದೆಯ 4.7.1 ನಿಯಮವನ್ನು ಉಲ್ಲಂಘನೆ ಆರೋಪದ ಮೇಲೆ ಪಾಕಿಸ್ತಾನದ ಉದಯೋನ್ಮುಖ ಆಟಗಾರ ಉಮರ್ ಅಕ್ಮಲ್ರನ್ನು ಪಿಸಿಬಿ ಅಮಾನತು ಮಾಡಿದೆ.
ಉಮರ್ ಅಕ್ಮಲ್ ವಿರುದ್ಧ ಗುರುವಾದಿಂದಲೇ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಲಿದ್ದಾರೆ. ಆದರೆ, ಭ್ರಷ್ಟಾಚಾರ ತಡೆ ಘಟಕದಿಂದ ತನಿಖೆ ನಡೆಯುತ್ತಿರುವುದರಿಂದ ಉಮರ್ ನಿಷೇಧದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗ ಮಾಡಲಾಗುವುದಿಲ್ಲ ಎಂದು ಪಿಸಿಬಿ ತಿಳಿಸಿದೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣವಾದ ಸಂದರ್ಭದಲ್ಲಿ ಲಾಹೋರ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಪಿಸಿಬಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಪಿಎಸ್ಎಲ್ ಆರಂಭದ ದಿನವೇ ಅವರ ವಿರುದ್ಧ ಪಿಸಿಬಿ ಅಮಾನತು ಆದೇಶ ಹೊರಡಿಸಿದೆ.

ಇಂದಿನಿಂದ ಪಿಎಸ್ಎಲ್ ಆರಂಭವಾಗುತ್ತಿದ್ದು, ಹಾಲಿ ಚಾಂಪಿಯನ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಉಮರ್ ಅಕ್ಮಲ್ ಕಣಕ್ಕಿಳಿಯಬೇಕಿತ್ತು. ಅಮಾನತಾಗಿರುವುದರಿಂದ ಅವರ ಬದಲಿಗೆ ಬೇರೊಬ್ಬ ಆಟಗಾರನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಅವಕಾಶ ನೀಡಿದೆ.
ಗುರುವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಎರಡು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ಸೆಣಸಾಡಲಿದೆ.
ಇನ್ನು ಗ್ಲೋಬಲ್ ಟಿ20 ಲೀಗ್ ವೇಳೆ ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್ ಆಫರ್ ನೀಡಿದ್ದನ್ನು ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಘಟಕಕ್ಕೆ ಅಕ್ಮಲ್ ವರದಿ ನೀಡಿ ಸುದ್ದಿಯಾಗಿದ್ದರು. ಇದೀಗ ಪಿಸಿಬಿ ಉಮರ್ ಅವರ ಮೇಲೆ ಯಾವ ಆರೋಪದ ಮೇಲೆ ಅಮಾನತು ಮಾಡಿದೆ ಎಂಬುದನ್ನು ತನಿಖೆ ನಂತರವಷ್ಟೇ ತಿಳಿಯಲಿದೆ.