ಲಾಹೋರ್: ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ತನ್ನ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಪರಿಷ್ಕರಿಸಲು ಮತ್ತು ಮ್ಯಾಚ್ ಫಿಕ್ಸಿಂಗ್ ಅನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಯೋಜನೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅನುಮೋದನೆ ನೀಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, ಈ ವಾರದ ಆರಂಭದಲ್ಲಿ ಪಿಸಿಬಿ ಅಧ್ಯಕ್ಷ ಎಹ್ಶಾನ್ ಮಣಿ, ಇಮ್ರಾನ್ ಖಾನ್ರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲೇ ಈ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಹೊರತಾಗಿಯೂ ರಾಷ್ಟ್ರೀಯ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಕೂಡ ಪ್ರಧಾನ ಮಂತ್ರಿ ಅನುಮತಿ ನೀಡಿದ್ದರು.
ಹೊಸ ಕಾನೂನಿನಡಿ ಮಂಡಳಿ, ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಅಪರಾಧ ಪ್ರಕರಣವಾಗಲಿವೆ. ಇದರಲ್ಲಿ ಪಾಲ್ಗೊಂಡವರಿಗೆ ಜೈಲು ಶಿಕ್ಷೆ ಇರಲಿದೆ ಎಂದು ಸರ್ಕಾರ ಸೂಚಿಸಿದೆ.
ಪಿಸಿಬಿಯ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕಕ್ಕೆ ಆಟಗಾರರು, ಅಧಿಕಾರಿಗಳು, ವ್ಯಕ್ತಿಗಳಿಂದ ಹಣ ಸಂಪಾದಿಸಿದ ಹಾದಿ, ಆಸ್ತಿಗಳ ಬಗ್ಗೆ ತನಿಖೆ ನಡೆಸಲು ಹಾಗೂ ಅಗತ್ಯವಿರುವ ಕಡೆದ ದಾಳಿ ನಡೆಸಲು ಮತ್ತು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು ತನಿಖಾ ಸಂಸ್ಥೆಗೆ ನೀಡಲಾಗುತ್ತದೆ.