ಅಬುಧಾಭಿ: ಹಾರ್ದಿಕ್ ಪಾಂಡ್ಯ(60) ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 195 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಆರಂಭಿಕ ಬ್ಯಾಟ್ಸ್ಮನ್ ಡಿಕಾಕ್ ಕೇವಲ 6 ರನ್ಗಳಿಗೆ ಔಟಾಗಿ ನಿರಾಶೆಯನುಭವಿಸಿದರು. ಆದರೆ ಇಶಾನ್ ಕಿಶನ್ 37 ಹಾಗೂ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 40 ರನ್ಗಳಿಸಿ ಆರಂಭಿಕ ಆಘಾತಕ್ಕೊಳಗಾಗಿದ್ದ ಮುಂಬೈಗೆ ಚೇತರಿಕೆ ನೀಡಿದರು.
-
Innings Break!
— IndianPremierLeague (@IPL) October 25, 2020 " class="align-text-top noRightClick twitterSection" data="
A quick-fire half-century at the back end of the innings by @hardikpandya7 as #MumbaiIndians post a total of 195/5 on the board.
Will #RR chase this down?#Dream11IPL pic.twitter.com/OB3AcTeZcr
">Innings Break!
— IndianPremierLeague (@IPL) October 25, 2020
A quick-fire half-century at the back end of the innings by @hardikpandya7 as #MumbaiIndians post a total of 195/5 on the board.
Will #RR chase this down?#Dream11IPL pic.twitter.com/OB3AcTeZcrInnings Break!
— IndianPremierLeague (@IPL) October 25, 2020
A quick-fire half-century at the back end of the innings by @hardikpandya7 as #MumbaiIndians post a total of 195/5 on the board.
Will #RR chase this down?#Dream11IPL pic.twitter.com/OB3AcTeZcr
ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಸೌರಭ್ ತಿವಾರಿ 25 ಎಸೆತಗಳಲ್ಲಿ 34 ರನ್ಗಳಿಸಿದರೆ, ಕೊನೆಯ 2 ಓವರ್ಗಳಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 7 ಸಿಕ್ಸರ್ಸ್ ಹಾಗೂ 2 ಬೌಂಡರಿ ಸಹಿತ ಔಟಾಗದೆ 60 ರನ್ಗಳಿಸಿದರಲ್ಲದೆ ಮುಂಬೈ ಮೊತ್ತವನ್ನು 195ಕ್ಕೇರಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಆರ್ಚರ್ 31ರನ್ ನೀಡಿ 2 ವಿಕೆಟ್, ಶ್ರೇಯಸ್ ಗೋಪಾಲ್ 30 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಆದರೆ ಯುವ ಬೌಲರ್ ಕಾರ್ತಿಕ್ ತ್ಯಾಗಿ 45 ರನ್, ಅಂಕಿತ್ ರಜಪೂತ್ 50 ರನ್ ನೀಡಿದ ದುಬಾರಿಯಾದರು.