ಲಾಹೋರ್: ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದ ಪಾಕಿಸ್ತಾನ, ಬಾಂಗ್ಲಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ದೇಶ 20 ಓವರ್‌ಗಳಲ್ಲಿ 6ವಿಕೆಟ್ನಷ್ಟಕ್ಕೆ 136ರನ್ಗಳಿಕೆ ಮಾಡ್ತು. ಬಾಂಗ್ಲಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ತಮಿಮ್ ಇಕ್ಬಾಲ್(65) ಬಿಟ್ಟು ಬೇರೆ ಯಾವುದೇ ಪ್ಲೇಯರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಹುಸೈನ್(21)ರನ್ ತಂಡಕ್ಕೆ ಅಸರೆಯಾದರು.
137ರನ್ಗಳ ಗುರಿ ಬೆನ್ನತ್ತಿದ್ದ ಪಾಕ್ 16.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 137 ರನ್ ಬಾರಿಸಿತು. ನಾಯಕ ಬಾಬರ್ ಆಜಂ 66 ಹಾಗೂ ಮೊಹಮ್ಮದ್ ಹಫೀಜ್ 67 ರನ್ ಮಾಡಿ ಅಜೇಯರಾಗಿ ಉಳಿದರು. ಶುಕ್ರವಾರದ ಮೊದಲ ಪಂದ್ಯವನ್ನು ಪಾಕ್ 5 ವಿಕೆಟ್‌ಗಳಿಂದ ಜಯಿಸಿತ್ತು. ಈಗಾಗಲೇ ಸರಣಿಯನ್ನ ಪಾಕ್ ತನ್ನದಾಗಿಸಿಕೊಂಡಿದ್ದು, ಸೋಮವಾರ ಫೈನಲ್ ಪಂದ್ಯ ನಡೆಯಲಿವೆ.