ಲಾಹೋರ್: ಅಂಡರ್ 19 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಭಾರತ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿರುವ ಯಶಸ್ವಿ ಜೈಸ್ವಾಲ್ನನ್ನು ನೋಡಿ ಪಾಕಿಸ್ತಾನ ಕ್ರಿಕೆಟಿಗರು ಕಲಿಯುವುದು ಬಹಳಷ್ಟಿದೆ ಎಂದು ಪಾಕ್ನ ಮಾಜಿ ವೇಗಿ ಶೋಯಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಆಡುವುದಕ್ಕಾಗಿ ಹಳ್ಳಿಯನ್ನು ಬಿಟ್ಟು ಮುಂಬೈಗೆ ಬಂದ ಬಾಲಕ, ಹಾಲಿನ ಡೈರಿಯಲ್ಲಿ ಕೆಲಸ ಮಾಡಿಕೊಂಡು, ಅಲ್ಲೆ ಮಲಗುತ್ತಿದ್ದ. ಹೊಟ್ಟೆ ತುಂಬಿಸಿಕೊಳ್ಳಲು ಪಾನಿಪೂರಿ ಮಾರಾಟ ಮಾಡುತ್ತಿದ್ದ ಆ ಹುಡುಗ ಇಂದು ಯಶಸ್ವಿನ ಅಲೆಯಲ್ಲಿ ತೇಲುತ್ತಿದ್ದಾನೆ. ಅಲ್ಲದೇ ಐಪಿಎಲ್ನಲ್ಲೂ ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿ ತಂಡಕ್ಕೂ ಸೇರ್ಪಡೆಗೊಂಡಿದ್ದಾನೆ. ಆ ಯುವಕ ಹಂತ ಹಂತವಾಗಿ ಬೆಳೆಯುತ್ತಿದ್ದಾನೆ" ಎಂದು ಜೈಸ್ವಾಲ್ರನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಕೊಂಡಾಡಿದ್ದಾರೆ
ಜೈಸ್ವಾಲ್ಗೆ ಆಟದಲ್ಲಿ ಶಕ್ತಿ, ಉತ್ಸಾಹ ಹಾಗೂ ಆಸಕ್ತಿ ಇದೆ. ಮುಂದೆ ಈತ ಭಾರತ ತಂಡದ ಪರ ಆಡುತ್ತಾನೆ. ಇದು ಸತ್ಯ ಎಂದು ಹೇಳಿರುವ ಅವರು ಪಾಕಿಸ್ತಾನ ಕ್ರಿಕೆಟಿಗರು ಜೈಸ್ವಾಲ್ ಇತಿಹಾಸವನ್ನು ತಿಳಿದು, ಆತನಿಂದ ಬಹಳ ಕಲಿಯಬೇಕಿದೆ. ಅವನು ಕ್ರಿಕೆಟ್ನ ಶ್ರೇಷ್ಠತೆಯಿಂದ ಓಡಿದ, ಇಂದು ದುಡ್ಡು ಅವನ ಹಿಂದೆ ಓಡುತ್ತಿದೆ" ಎಂದು ಅಖ್ತರ್ ತಿಳಿಸಿದ್ದಾರೆ.
- " class="align-text-top noRightClick twitterSection" data="">
ಇನ್ನು ಯುವ ಭಾರತ ತಂಡದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು," ಸೆಮಿಫೈನಲ್ ಪ್ರವೇಶಿಸಿದ್ದಕ್ಕಾಗಿ ಪಾಕ್ ತಂಡಕ್ಕೆ ಅಭಿನಂದನೆ. ಇದು ಒಳ್ಳೆಯ ಪ್ರಯತ್ನ, ಆದರೆ, ಫೈನಲ್ ಪ್ರವೇಶಿಸಲು ನಿಮ್ಮ ಪ್ರಯತ್ನ ಸಾಕಾಗಲಿಲ್ಲ. ಆದರೆ, ಫೈನಲ್ ಪ್ರವೇಶಿಸಲು ನಿಮಗಿಂತ ಭಾರತ ತಂಡ ಅರ್ಹವಾಗಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಸ್ತುತ ಅಂಡರ್ 19 ತಂಡದಲ್ಲಿ ಕೆಲವು ಆಟಗಾರರು ಖಂಡಿತವಾಗಿಯೂ ಭಾರತ ತಂಡದ ಪರ ಭವಿಷ್ಯದಲ್ಲಿ ಆಡಲಿದ್ದಾರೆ. ಭವಿಷ್ಯದಲ್ಲಿ ಭಾರತ ಕ್ರಿಕೆಟ್ ಉತ್ತಮವಾಗಿರಲಿದೆ, ಅದನ್ನು ನೋಡುವುದಕ್ಕೆ ನನಗೂ ಖುಷಿಯಿದೆ ಎಂದು ಅವರು ತಿಳಿಸಿದ್ದಾರೆ.