ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಸಿಕ್ಸರ್ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ್ದಾರೆ.
ಇಂಗ್ಲೆಂಡ್ ತಂಡದ ಸಾದಿಕ್ ಮಹ್ಮೂದ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 2 ಸಾವಿರ ಪೂರೈಸಿದ್ದಾರೆ. ಹಫೀಜ್ ಈ ಸಾಧನೆ ಮಾಡಿದ ಪಾಕಿಸ್ತಾನದ ಎರಡನೇ ಹಾಗೂ ವಿಶ್ವದ 9ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
-
🎉 Mohammad Hafeez has become just the second 🇵🇰 player to score 2️⃣0️⃣0️⃣0️⃣ T20I runs 🎉 #ENGvPAK pic.twitter.com/NxeyGfUIz2
— ICC (@ICC) August 30, 2020 " class="align-text-top noRightClick twitterSection" data="
">🎉 Mohammad Hafeez has become just the second 🇵🇰 player to score 2️⃣0️⃣0️⃣0️⃣ T20I runs 🎉 #ENGvPAK pic.twitter.com/NxeyGfUIz2
— ICC (@ICC) August 30, 2020🎉 Mohammad Hafeez has become just the second 🇵🇰 player to score 2️⃣0️⃣0️⃣0️⃣ T20I runs 🎉 #ENGvPAK pic.twitter.com/NxeyGfUIz2
— ICC (@ICC) August 30, 2020
ಇವರಿಗೂ ಮುನ್ನ ಶೋಯಭ್ ಮಲಿಕ್(2321) ಈ ಸಾಧನೆ ಮಾಡಿದ ಮೊದಲ ಪಾಕ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಇನ್ನು ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ 2794 ಹಾಗೂ 2773 ರನ್ಗಳಿಸಿ ಅತಿ ಹೆಚ್ಚು ರನ್ಗಳಿಸಿದ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ನಂತರದಲ್ಲಿ ನ್ಯೂಜಿಲ್ಯಾಂಡ್ನ ಮಾರ್ಟಿನ್ ಗಪ್ಟಿಲ್(2536), ಶೋಯಬ್ ಮಲಿಕ್(2322), ಆಸೀಸ್ನ ಡೇವಿಡ್ ವಾರ್ನರ್(2207), ಇಂಗ್ಲೆಂಡ್ನ ಇಯಾನ್ ಮಾರ್ಗನ್(2152), ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಮ್(2140), ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್(2124) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳೆನಿಸಿಕೊಂಡಿದ್ದಾರೆ.