ETV Bharat / sports

ಪಾಕ್​ vs ದಕ್ಷಿಣ ಆಫ್ರಿಕಾ: ಮೊಹಮ್ಮದ್ ರಿಜ್ವಾನ್ ಭರ್ಜರಿ ಶತಕ, ಪಾಕಿಸ್ತಾನಕ್ಕೆ 3 ರನ್​​ಗಳ ರೋಚಕ ಜಯ

ಬೃಹತ್​ ಮೊತ್ತವನ್ನ ಬೆನ್ನಟ್ಟಿದ ಸೌತ್​ ಆಫ್ರಿಕಾ ತಂಡ ನಿಗದಿತ 20 ಓವರ್​ಗಳಲ್ಲಿ 166 ರನ್​​​ ಗಳಿಸಿತು, ಇದರಿಂದ ವಿರೋಚಿತ ಸೋಲು ಅನುಭವಿಸಿತು. ಸೌತ್​ ಆಫ್ರಿಕಾ ಪರ ಉತ್ತಮ ಬ್ಯಾಟಿಂಗ್​ ಮಾಡಿದ ರೀಜಾ ಹೆಂಡ್ರಿಕ್ಸ್ 42 ಎಸೆತಗಳಲ್ಲಿ (8 ಬೌಂಡರಿ) 54 ರನ್ ಗಳಿಸಿದರು. ಇವರಿಗೆ ಉತ್ತಮ ಸಾತ್​ ನೀಡಿದ ಮಲನ್ 44 ರನ್ ಗಳಿಸಿದರು ತಂಡಕ್ಕೆ ಜಯ ತಂದು ಕೊಡುವಲ್ಲಿ ವಿಫಲರಾದರು.

author img

By

Published : Feb 12, 2021, 2:00 PM IST

PAK vs SA: Rizwan's ton helps hosts defeat Proteas in first T20I
ಮೊಹಮ್ಮದ್ ರಿಜ್ವಾನ್ ಭರ್ಜರಿ ಶತಕ, ಪಾಕಿಸ್ತಾನಕ್ಕೆ 3 ರನ್​​ಗಳ ರೋಚಕ ಜಯ

ಲಾಹೋರ್ [ಪಾಕಿಸ್ತಾನ]: ದಕ್ಷಿಣ ಆಫ್ರಿಕಾ ತಂಡ ಮತ್ತು ಪಾಕಿಸ್ತಾನ ಮೊದಲ ಟಿ - 20 ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ತಂಡ 3 ರನ್​​ಗಳ ರೋಚಕ ಜಯ ಗಳಿಸಿದೆ.

ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿತು. ಕೇವಲ 1 ರನ್​ಗಳಿಸಿದಾಗ ನಾಯಕ ಬಾಬರ್ ಅಜಂ ರನ್​ ಔಟ್​​ ಆದರು. ನಂತರ ಕ್ರೀಸ್​ ನಲ್ಲಿ ಗಟ್ಟಿಯಾಗಿನಿಂತ ಮೊಹಮ್ಮದ್ ರಿಜ್ವಾನ್ ಚೊಚ್ಚಲ ಟಿ - 20 ಶತಕ ಸಿಡಿಸಿ ಮಿಂಚಿದರು. ಕೇವಲ 64 ಎಸೆತಗಳಲ್ಲಿ ಏಳು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಾಯದಿಂದ 104 ರನ್​ ಸಿಡಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡ 20 ಓವರ್​ಗಳಲ್ಲಿ 6 ವಿಕೆಟ್​​ ಕಳೆದುಕೊಂಡು 169 ರನ್ ಗಳಿಸಿತು.

ಈ ಬೃಹತ್​ ಮೊತ್ತವನ್ನ ಬೆನ್ನಟ್ಟಿದ ಸೌತ್​ ಆಫ್ರಿಕಾ ತಂಡ ನಿಗದಿತ 20 ಓವರ್​ಗಳಲ್ಲಿ 166 ರನ್​​​ ಗಳಿಸಿತು, ಇದರಿಂದ ವಿರೋಚಿತ ಸೋಲು ಅನುಭವಿಸಿತು. ಸೌತ್​ ಆಫ್ರಿಕಾ ಪರ ಉತ್ತಮ ಬ್ಯಾಟಿಂಗ್​ ಮಾಡಿದ ರೀಜಾ ಹೆಂಡ್ರಿಕ್ಸ್ 42 ಎಸೆತಗಳಲ್ಲಿ (8 ಬೌಂಡರಿ) 54 ರನ್ ಗಳಿಸಿದರು. ಇವರಿಗೆ ಉತ್ತಮ ಸಾತ್​ ನೀಡಿದ ಮಲನ್ 44 ರನ್ ಗಳಿಸಿದರು ತಂಡಕ್ಕೆ ಜಯ ತಂದು ಕೊಡುವಲ್ಲಿ ವಿಫಲರಾದರು.

ಓದಿ : ನಾಳೆಯಿಂದ 2ನೇ ಟೆಸ್ಟ್ ಪಂದ್ಯ.. ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ..

ಸಂಕ್ಷಿಪ್ತ ಸ್ಕೋರ್​ : ಪಾಕಿಸ್ತಾನ 20 ಓವರ್​ಗಳಲ್ಲಿ 169/6 ಮೊಹಮ್ಮದ್ ರಿಜ್ವಾನ್ 104, ಹೈದರ್​ ಅಲಿ 21, ಪೀಲಕ್ವಾಯೋ 2/33, ಸೌತ್​ ಆಫ್ರಿಕಾ 20 ಓವರ್​ಗಳಲ್ಲಿ 166/6 ಮಲನ್ 44, ರೀಜಾ ಹೆಂಡ್ರಿಕ್ಸ್ 54, ಹ್ಯಾರಿಸ್​ ರವೂಫ್ 2/44, ಉಸ್ಮಾನ್​ ಖಾದಿರ್ 2/21.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.