ಅಬುಧಾಬಿ: ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಬೈಗೆ ಗೆಲ್ಲಲು 165 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ಸಿಬಿ ಮೊದಲ ವಿಕೆಟ್ಗೆ 71 ರನ್ಗಳಿಸಿತು. ದೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಜೋಶ್ ಫಿಲಿಪ್ಪೆ ಉತ್ತಮ ಜೊತೆಯಾಟ ನೀಡಿದರು. ಫಿಲಿಪ್ಪೆ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 33 ರನ್ಗಳಿಸಿ ಸ್ಟಂಪ್ ಔಟ್ ಆದರು.
-
Innings Break!#RCB post a total of 164/6 on the board. #MI chase coming up shortly. Stay tuned.
— IndianPremierLeague (@IPL) October 28, 2020 " class="align-text-top noRightClick twitterSection" data="
Scorecard - https://t.co/XWqNw97Zzc #Dream11IPL pic.twitter.com/N2wqGtYWqk
">Innings Break!#RCB post a total of 164/6 on the board. #MI chase coming up shortly. Stay tuned.
— IndianPremierLeague (@IPL) October 28, 2020
Scorecard - https://t.co/XWqNw97Zzc #Dream11IPL pic.twitter.com/N2wqGtYWqkInnings Break!#RCB post a total of 164/6 on the board. #MI chase coming up shortly. Stay tuned.
— IndianPremierLeague (@IPL) October 28, 2020
Scorecard - https://t.co/XWqNw97Zzc #Dream11IPL pic.twitter.com/N2wqGtYWqk
ಆರ್ಸಿಬಿ ಉತ್ತಮ ಆರಂಭದ ನಂತರ ದಿಢೀರ್ ಕುಸಿತ ಕಂಡಿತು. ಭರವಸೆಯ ಬ್ಯಾಟ್ಸ್ಮನ್ಗಳಾದ ಕೊಹ್ಲಿ 9 ರನ್ ಹಾಗೂ ವಿಲಿಯರ್ಸ್ 15 ರನ್ಗಳಿಗೆ ಔಟ್ ಆದರೆ, ಆಲ್ರೌಂಡರ್ ಶಿವಂ ದುಬೆ 2, ಮೋರಿಸ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ, ಮತ್ತೊಂದು ಕಡೆ ಮಿಂಚಿದ ದೇವದತ್ ಪಡಿಕ್ಕಲ್ 45 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 74 ರನ್ಗಳಿಸಿದರು. ಕೊನೆಯಲ್ಲಿ ಗುರ್ಕಿರಾತ್ ಮನ್ 14, ವಾಷಿಂಗ್ಟನ್ ಸುಂದರ್ 10 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 14 ರನ್ ನೀಡಿ 3 ವಿಕೆಟ್, ಬೌಲ್ಟ್ 40ಕ್ಕೆ 1, ರಾಹುಲ್ ಚಹಾರ್ 43ಕ್ಕೆ 1, ಪೊಲಾರ್ಡ್ 5 ರನ್ ನೀಡಿ 1 ವಿಕೆಟ್ ಪಡೆದು ಆರ್ಸಿಬಿ ದೊಡ್ಡ ಮೊತ್ತ ದಾಖಲಿಸಿದಂತೆ ನೋಡಿಕೊಂಡರು.