ETV Bharat / sports

ಒಮನ್​ ವಿರುದ್ಧ ಸೋತ ಚೆಟ್ರಿ ಪಡೆ... ಭಾರತ ಫುಟ್ಬಾಲ್​ ತಂಡದ ವಿಶ್ವಕಪ್​ ಅರ್ಹತೆ ಕನಸು ಭಗ್ನ!

ಫುಟ್ಬಾಲ್​​ ವಿಶ್ವಕಪ್​ ಅರ್ಹತೆ ಪಡೆದುಕೊಳ್ಳುವ ಕನಸು ಕಾಣುತ್ತಿದ್ದ ಭಾರತ ಫುಟ್ಬಾಲ್​ ತಂಡಕ್ಕೆ ಇದೀಗ ಶಾಕ್​ ಉಂಟಾಗಿದ್ದು, ಒಮನ್​ ವಿರುದ್ಧ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ.

ಭಾರತ ಫುಟ್ಬಾಲ್​ ತಂಡ
author img

By

Published : Nov 20, 2019, 3:55 AM IST

ಮಸ್ಕತ್​​: ವಿಶ್ವಕಪ್​ ಅರ್ಹತೆ ಪಡೆದುಕೊಳ್ಳಲು ಮಹತ್ವ ಪಡೆದುಕೊಂಡಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆಟ್ರಿ ಪಡೆ ಸೋಲು ಕಂಡಿದ್ದರಿಂದ ಭಾರತ ಫುಟ್ಬಾಲ್​ ತಂಡದ ವಿಶ್ವಕಪ್​​ ಕನಸು ಕಮರಿ ಹೋಗಿದೆ.

ಈಗಾಗಲೇ ಒಮನ್​ ವಿರುದ್ಧ ಸೋಲು ಕಂಡಿದ್ದ ಭಾರತ ತಂಡ ತದನಂತರ ಕತಾರ್​,ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿತ್ತು. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಚಟ್ರಿ ಪಡೆ 0-1 ಅಂತರದಲ್ಲಿ ಸೋಲು ಕಂಡಿರುವ ಕಾರಣ ವಿಶ್ವಕಪ್​ ಅರ್ಹತೆ ಪಡೆದುಕೊಳ್ಳುವ ಕನಸು ಹಾಗೇ ಉಳಿದುಕೊಳ್ಳಬೇಕಾಯ್ತು.

ಆರಂಭದಿಂದಲೂ ಎರಡು ತಂಡಗಳ ನಡುವೆ ಉತ್ತಮ ಆಟ ಕಂಡು ಬಂದಿತ್ತು. ಆದರೆ 33ನೇ ನಿಮಿಷದಲ್ಲಿ ಮೊಹಸಿನ್​ ಜೋಹರ್​ ಗೋಲ್​ ಗಳಿಕೆ ಮಾಡಿದ್ದರಿಂದ ಭಾರತ ಹಿಡಿತ ಕಳೆದುಕೊಂಡಿತು. ಇದಾದ ಬಳಿಕ ಭಾರತ ಯಾವುದೇ ಗೋಲು ಗಳಿಕೆ ಮಾಡಲಿಲ್ಲ. ಹೀಗಾಗಿ ತಂಡ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಅರ್ಹತಾ ಸುತ್ತಿನಲ್ಲಿ ಭಾರತ ಇನ್ನು ಮೂರು ಪಂದ್ಯ ಆಡಬೇಕಿದೆ.

Intro:Body:

ಒಮನ್​ ವಿರುದ್ಧ ಸೋತ ಚೆಟ್ರಿ ಪಡೆ... ಭಾರತ ಫುಟ್ಬಾಲ್​ ತಂಡದ ವಿಶ್ವಕಪ್​ ಅರ್ಹತೆ ಕನಸು

ಮಸ್ಕತ್​​: ವಿಶ್ವಕಪ್​ ಅರ್ಹತೆ ಪಡೆದುಕೊಳ್ಳಲು ಮಹತ್ವ ಪಡೆದುಕೊಂಡಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆಟ್ರಿ ಪಡೆ ಸೋಲು ಕಂಡಿದ್ದರಿಂದ ಭಾರತ ಫುಟ್ಬಾಲ್​ ತಂಡದ ವಿಶ್ವಕಪ್​​ ಕನಸು ಕಮರಿ ಹೋಗಿದೆ.

ಈಗಾಗಲೇ ಒಮನ್​ ವಿರುದ್ಧ ಸೋಲು ಕಂಡಿದ್ದ ಭಾರತ ತಂಡ ತದನಂತರ ಕತಾರ್​,ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿತ್ತು. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಚಟ್ರಿ ಪಡೆ 0-1 ಅಂತರದಲ್ಲಿ ಸೋಲು ಕಂಡಿರುವ ಕಾರಣ ವಿಶ್ವಕಪ್​ ಅರ್ಹತೆ ಪಡೆದುಕೊಳ್ಳುವ ಕನಸು ಹಾಗೇ ಉಳಿದುಕೊಳ್ಳಬೇಕಾಯ್ತು. 

ಆರಂಭದಿಂದಲೂ ಎರಡು ತಂಡಗಳ ನಡುವೆ ಉತ್ತಮ ಆಟ ಕಂಡು ಬಂದಿತ್ತು. ಆದರೆ 33ನೇ ನಿಮಿಷದಲ್ಲಿ ಮೊಹಸಿನ್​ ಜೋಹರ್​ ಗೋಲ್​ ಗಳಿಕೆ ಮಾಡಿದ್ದರಿಂದ ಭಾರತ ಹಿಡಿತ ಕಳೆದುಕೊಂಡಿತು. ಇದಾದ ಬಳಿಕ ಭಾರತ ಯಾವುದೇ ಗೋಲು ಗಳಿಕೆ ಮಾಡಲಿಲ್ಲ. ಹೀಗಾಗಿ ತಂಡ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.