ETV Bharat / sports

NZ vs BAN ಮೊದಲ ಟಿ-20: ಕಿವೀಸ್‌ಗೆ‌ ಗೆಲುವು ತಂದುಕೊಟ್ಟ ಕಾನ್ವೆ, ಸೋಧಿ

author img

By

Published : Mar 28, 2021, 12:11 PM IST

ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕಿವೀಸ್​​ ತಂಡ ಮೊದಲ ಪಂದ್ಯದಲ್ಲಿ 66 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಸರಣಿಯಲ್ಲಿ 1-0 ದಿಂದ ಮುನ್ನಡೆ ಸಾಧಿಸಿದೆ.

NZ vs Ban, 1st T20I
ನ್ಯೂಜಿಲ್ಯಾಂಡ್​-ಬಾಂಗ್ಲಾ ಮೊದಲ ಟಿ-20 ಪಂದ್ಯದಲ್ಲಿ ಗೆದ್ದು ಬಿಗಿದ ಕಿವೀಸ್​

ಹ್ಯಾಮಿಲ್ಟನ್ (ನ್ಯೂಜಿಲೆಂಡ್) : ನ್ಯೂಜಿಲೆಂಡ್ -ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕಿವೀಸ್​​ ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್‌ ಮಾಡಿದ ಕಿವೀಸ್​​ ತಂಡ ನಿಗದಿತ 20 ಓವರ್​​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 210 ರನ್​ಗಳಿಸಿತು. ಹೊಡಿಬಡಿ ಆಟಕ್ಕಿಳಿದ ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಅರ್ಧ ಶತಕ ಸಿಡಿಸಿ ತಂಡವನ್ನು ಬೃಹತ್ತ ಮೊತ್ತದತ್ತ ಕೊಂಡೊಯ್ದರು. ಈ ಪಂದ್ಯದಲ್ಲಿ ಡೆವೊನ್ ಕಾನ್ವೆ ಕೇವಲ 52 ಬಾಲ್​ಗಳಲ್ಲಿ 11 ಬೌಂಡರಿ, 3 ಭರ್ಜರಿ ಸಿಕ್ಸರ್​ ನೆರವಿನಿಂದ 92 ರನ್​ಗಳಿಸಿ ಔಟಾಗದೆ ಉಳಿದರು. ಇವರಿಗೆ ಉತ್ತಮ ಸಾಥ್​ ನೀಡಿದ ವಿಲ್ ಯಂಗ್ 30 ಬಾಲ್​ಗಳಲ್ಲಿ 2 ಬೌಂಡರಿ ಹಾಗು 4 ಭರ್ಜರಿ ಸಿಕ್ಸರ್​ ನೆರವಿನಿಂದ 53 ರನ್​ಗಳಿಸಿ ಮಿಂಚಿದರು.

ಈ ಬೃಹತ್​ ಮೊತ್ತ ಬೆನ್ನಟ್ಟಿದ ಬಾಂಗ್ಲಾ ಪಡೆ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 144 ರನ್​ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರ ಅಫೀಫ್ ಹೊಸೈನ್ ಮತ್ತು ಮೊಹಮ್ಮದ್ ಸೈಫುದ್ದೀನ್ ಬಿಟ್ಟರೆ ಬೇರೆ ಯಾವೊಬ್ಬ ಆಟಗಾರನೂ ಕೂಡಾ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಲಿಲ್ಲ. ಅಫೀಫ್ ಹೊಸೈನ್ 33 ಬಾಲ್​ಗಳಲ್ಲಿ 5 ಬೌಂಡರಿ 1 ಸಿಕ್ಸರ್​ ನೆರವಿನಿಂದ 45 ರನ್​ಗಳಿಸಿದರೆ, ಮೊಹಮ್ಮದ್ ಸೈಫುದ್ದೀನ್ 34 ಬಾಲ್​ಗಳಲ್ಲಿ 3 ಬೌಂಡರಿ 1 ಸಿಕ್ಸರ್​ ನೆರವಿನಿಂದ 34 ರನ್​ಗಳಿಸಿದರು.

ಕಿವೀಸ್​ ಪರ ಉತ್ತಮ ಬೌಲಿಂಗ್ ಮಾಡಿದ ಇಶ್ ಸೋಧಿ 4 ವಿಕೆಟ್​ ಪಡೆದರು.

ಇದನ್ನೂ ಓದಿ: ಇಂಡೋ-ಆಂಗ್ಲ ಫೈನಲ್​ ಕದನ: ಪಂದ್ಯ ಗೆದ್ದು, ಹ್ಯಾಟ್ರಿಕ್​ ಸರಣಿ ಗೆಲ್ಲುವ ತವಕದಲ್ಲಿ ಕೊಹ್ಲಿ ಪಡೆ!

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್ 20 ಓವರ್​​​ಗಳಲ್ಲಿ 210/3

ಡೆವೊನ್ ಕಾನ್ವೆ 92 *

ವಿಲ್ ಯಂಗ್ 53

ಅಹ್ಮದ್ 2/30)

ಬಾಂಗ್ಲಾದೇಶ 20 ಓವರ್​​​ಗಳಲ್ಲಿ144/8

ಅಫೀಫ್ ಹೊಸೈನ್ 45

ಮೊಹಮ್ಮದ್ ಸೈಫುದ್ದೀನ್ 34 *

ಇಶ್ ಸೋಧಿ 4/28)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.