ಚೆನ್ನೈ: ಭಾರತ ತಂಡದ ಸೂಪರ್ ಆಫ್ ಸ್ಪಿನ್ನರ್ ಜೋಡಿಯಾಗಿ ಹರ್ಭಜನ್ ಸಿಂಗ್ ಹಾಗೂ ರವಿಚಂದ್ರನ್ ಅಶ್ವಿನ್ 5-6 ವರ್ಷದಗಳ ಕಾಲ ಮಿಂಚಿದ್ದರು. ಭಾರತವನ್ನು ಮೊದಲ ಬಾರಿಗೆ ಮೊದಲ ಶ್ರೇಯಾಂಕಕ್ಕೆ ಕೊಂಡೊಯ್ಯಲು ಇವರಿಬ್ಬರ ಪಾತ್ರ ಮಹತ್ವದ್ದಾಗಿತ್ತು.
ಸೋಮವಾರ ಅಶ್ವಿನ್, ತಮ್ಮ ‘ರೆಮಿನಿಶ್ ವಿತ್ ಆ್ಯಶ್’ ಎಂಬ ಇನ್ಸ್ಟಾಗ್ರಾಮ್ ಶೋನಲ್ಲಿ ಹರ್ಭಜನ್ ಜೊತೆ ಕೆಲವು ಕ್ರಿಕೆಟ್ಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡರು.
2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಸೈರಾಜ್ ಬಹುತಲೆ ಬೌಲಿಂಗ್ನಲ್ಲಿ ಆಸೀಸ್ ಸ್ಫೋಟಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಅವರ ಕ್ಯಾಚ್ ಬಿಟ್ಟಿದ್ದರು. ತಕ್ಷಣ ಭಜ್ಜಿ ಸೈರಾಜ್ ಬಳಿ ತೆರಳಿ ಕ್ಷಮೆ ಕೇಳಿದ್ದರು. ಅಲ್ಲದೇ ನಂತರ ತಮ್ಮ ಓವರ್ನಲ್ಲಿ ಕಾಲಿನ್ ಮಿಲ್ಲರ್ ಕ್ಯಾಚ್ ಅನ್ನು ಸೈರಾಜ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಈ ಇಬ್ಬರು ಆಟಗಾರರ ನಡುವೆ ನಡೆದಿದ್ದ ಕ್ರೀಡಾಸ್ಫೂರ್ತಿಯ ಸನ್ನಿವೇಶವನ್ನುಅಶ್ವಿನ್ ನೆನೆಪಿಸಿದರು.
![ಹರ್ಭಜನ್ ಸಿಂಗ್](https://etvbharatimages.akamaized.net/etvbharat/prod-images/bhajji_1604newsroom_1587035283_974.jpeg)
"ನಾನು ಚೆಪಾಕ್ ಟೆಸ್ಟ್ ಪಂದ್ಯಗಳನ್ನು ಎಂದಿಗೂ ಮರೆಯುವುದಿಲ್ಲ. ನಾನು ಅಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇನೆ, ಇನ್ನು ಕೆಲವುನ್ನು ಸ್ಟ್ಯಾಂಡ್ನಲ್ಲಿ ನಿಂತು ನೋಡಿದ್ದೇನೆ. ಆಸೀಸ್ ವಿರುದ್ಧದ ಆ ಪಂದ್ಯದಲ್ಲಿ ನೀವು ಬಹುತಲೇ ಬಳಿ ಹೇಡನ್ ಕ್ಯಾಚ್ ಕೈಚೆಲ್ಲಿದ್ದಕ್ಕೆ ಕ್ಷಮೇ ಕೇಳಿದ್ದನ್ನು ನಾನು ನೋಡಿದ್ದೆ. ಈ ಸನ್ನಿವೇಶವನ್ನು ನನ್ನ ತಂದೆ ನನಗೆ ತೋರಿಸಿ ಬೌಲರ್ ಮುಂದಿನ ಎಸೆತಕ್ಕೆ ಸಿದ್ದವಾಗಬೇಕಾದರೆ ಇಬ್ಬರು ಕ್ರೀಡಾಪಟುಗಳ ನಡುವಿನ ಕ್ರೀಡಾಸ್ಪೂರ್ತಿ ಆಟದಲ್ಲಿ ಎಷ್ಟು ಮುಖ್ಯ ಎಂಬುದುನ್ನು ನನಗೆ ತಿಳಿಸಿದ್ದರು. ಇದು ನನ್ನ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿತು" ಎಂದು ನೆನೆಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಭಜ್ಜಿ ಕೂಡ ಅಂದಿನ ಆ ಘಟನೆಗೆ ಬೇಸರ ವ್ಯಕ್ತಪಡಿಸಿದರು. "ನನಗೂ ಕೂಡ ಬೇಸರವಾಗಿತ್ತು, ಏಕೆಂದರೆ ಹೇಡನ್ ಡಬಲ್ ಸೆಂಚುರಿ ಬಾರಿಸಿದ್ದರು. ಆದರೆ ಬಹುತಲೆ ಚೆನ್ನಾಗಿ ಬೌಲಿಂಗ್ ಮಾಡಿದರು ಹೆಚ್ಚಿನ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಆತ ಇದೆಲ್ಲ ಆಟದಲ್ಲಿ ನಡೆಯುತ್ತಿರುತ್ತದೆ, ಚಿಂತೆ ಬಿಡು ಎಂದು ತಿಳಿಸಿದ್ದರು. ಅವರು ನನ್ನ ರೂಮ್ಮೇಟ್ ಸಹಾ ಆಗಿದ್ದರೂ ಪಂದ್ಯದ ನಂತರ ಈ ಘಟನೆಯ ಬಗ್ಗೆ ಕಿಂಚಿತ್ತು ಮಾತನಾಡಿರಲಿಲ್ಲ" ಎಂದು ಭಜ್ಜಿ 19 ವರ್ಷಗಳ ಹಿಂದಿನ ಘಟನೆಯನ್ನು ನೆನೆಪಿಸಿಕೊಂಡರು.
ಹಾಗೆಯೇ ಮುಂದುವರಿಸಿದ ಭಜ್ಜಿ ಪ್ರಸ್ತುತ ಕ್ರಿಕೆಟ್ನಲ್ಲಿ ಅಶ್ವಿನ್ ವಿಶ್ವದ ಅತ್ಯುತ್ತಮ ಆಫ್ ಸ್ಪಿನ್ನರ್ ಎಂದು ಹೇಳಿದ್ದಾರೆ. "ತುಂಬಾ ಜನ ನಮ್ಮಿಬ್ಬರ ಮಧ್ಯೆ ತುಂಬಾ ಹೊಟ್ಟೆಕಿಚ್ಚಿದ ಎಂದು ಹೇಳುತ್ತಾರೆ. ಆದರೆ ನನ್ನ ಮತ್ತು ಅಶ್ವಿನ್ ನಡುವೆ ಅಂತಹದ್ದೇನು ಇಲ್ಲ ಎಂದು ವಿರೋಧಿಗಳಿಗೆ ಹೇಳಲು ಇಷ್ಟಪಡುತ್ತೇನೆ. ಅಶ್ವಿನ್ ಪ್ರಸ್ತುತ ವಿಶ್ವದ ಅತ್ಯುತ್ತಮ ಆಫ್ ಸ್ಪಿನ್ನರ್. ಇವರ ಜೊತೆಗೆ ಆಸೀಸ್ನ ನಥನ್ ಲಿಯಾನ್ರನ್ನು ಆಯ್ಕೆ ಮಾಡುತ್ತೇನೆ." ಎಂದಿದ್ದಾರೆ ಹರ್ಭಜನ್
ನಥನ್ ಲಿಯಾನ್ ಕೂಡ ಬೆಸ್ಟ್ ಆಫ್ ಸ್ಪಿನ್ನರ್ ಎಂದು ಹೇಳುತ್ತೇನೆ ಏಕೆಂದರೆ, ಅವರು ಸ್ಪಿನ್ಗೆ ಕಂಟಕಪ್ರಾಯವಾಗಿರುವ ಪಿಚ್ಗಳಿರುವ ಆಸ್ಟ್ರೇಲಿಯಾದಿಂದ ಹೊರಬಂದಿರುವ ಸ್ಪಿನ್ನರ್ ಆಗಿದ್ದಾರೆ. ಆದರೆ, ಅಶ್ವಿನ್ ದಂತಕತೆಯಾಗಿದ್ದಾರೆ. ನಾನು ಬಯಸುವುದೇನೆಂದರೆ ಅವರು ಹೆಚ್ಚು ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನಷ್ಟು ವರ್ಷಗಳ ಕಾಲ ಫಿಟ್ ಆಗಿದ್ದರೆ ವಿಶ್ವದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಸಾಲಿನಲ್ಲಿ ಖಂಡಿತ ನಿಲ್ಲಬಹುದು ಎಂದು ಭಜ್ಜಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.