ETV Bharat / sports

ಟಿ-20 ಬ್ಲಾಸ್ಟ್: ಸರ್ರೆ ಮಣಿಸಿ ಚಾಂಪಿಯನ್ ಆದ ನಾಟಿಂಗ್‌ಹ್ಯಾಮ್‌ಶೈರ್ ​

2017ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿದ್ದ ನಾಟಿಂಗ್‌ಹ್ಯಾಮ್‌ಶೈರ್ ​, 3 ವರ್ಷಗಳ ಬಳಿಕ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿದೆ.

ಸರ್ರೆ ಮಣಿಸಿ ಚಾಂಪಿಯನ್ ಆದ ನಾಟಿಂಗ್‌ಹ್ಯಾಮ್‌ಶೈರ್ ​

author img

By

Published : Oct 5, 2020, 5:32 PM IST

ಬರ್ಮಿಂಗ್​ಹ್ಯಾಮ್​: ಇಂಗ್ಲೆಂಡ್​ ಕ್ರಿಕೆಟ್ ಆಯೋಜಿಸುವ 2020ರ ಟಿ20 ಬ್ಲಾಸ್ಟ್​ ಲೀಗ್​ನ ಫೈನಲ್​ ಪಂದ್ಯದಲ್ಲಿ ಸರ್ರೆ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಡೇನಿಯಲ್ ಕ್ರಿಸ್ಟಿಯನ್ ನೇತೃತ್ವದ ನಾಟಿಂಗ್‌ಹ್ಯಾಮ್‌ಶೈರ್ ​ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

2017ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿದ್ದ ನಾಟಿಂಗ್‌ಹ್ಯಾಮ್‌ಶೈರ್ , 3 ವರ್ಷಗಳ ಬಳಿಕ ತಮ್ಮ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿದೆ. ಮಳೆಯ ಕಾರಣ ಫೈನಲ್ ಪಂದ್ಯವನ್ನು ಮುಂದೂಡಲಾಗಿತ್ತು. ಇಂದು ಕೂಡ ಮಳೆ ಅಡಚಣೆ ಮಾಡಿದ್ದರಿಂದ ಪಂದ್ಯವನ್ನು 16 ಓವರ್​ಗಳಿಗೆ ಇಳಿಸಲಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಸರ್ರೆ ತಂಡ ಜೇಸನ್ ರಾಯ್​ ಅವರ 66 ರನ್​ ಹಾಗೂ ಲೌರೀ ಇವಾನ್ಸ್​ ಅವರ 43 ರನ್​ಗಳ ನೆರವಿನಿಂದ 16 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್​ಗಳಿಸಿತ್ತು.

ನಾಟಿಂಗ್‌ಹ್ಯಾಮ್‌ಶೈರ್ ​ತಂಡದ ಪರ ನಾಯ ಕ್ರಿಸ್ಟಿಯನ್, 4 ವಿಕೆಟ್​ ಹಾಗೂ ಜಾಕ್ ಬಾಲ್​ 2 ವಿಕೆಟ್ ಪಡೆದು ಎದುರಾಳಿ ತಂಡದ ರನ್​ಗತಿ ಏರದಂತೆ ತಡೆದರು.

128 ರನ್​ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಇನ್ನು 16 ಎಸೆತಗಳಿರುವಂತೆ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತು. ಬೆನ್​ ಡಕ್ಕೆಟ್​ 38 ಎಸೆತಗಳಲ್ಲಿ 53 ರನ್​, ಪೇಟರ್ ಟ್ರೆಗೋ 31 ಹಾಗೂ ಡೇನಿಯಲ್ ಕ್ರಿಸ್ಟಿಯನ್ 21 ರನ್​ಗಳಿಸಿ ನಾಟಿಂಗ್‌ಹ್ಯಾಮ್‌ಶೈರ್ ​ತಂಡಕ್ಕೆ 6 ವಿಕೆಟ್​ಗಳ ಗೆಲುವು ತಂದು ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.