ಶಾರ್ಜಾ: ಐಪಿಎಲ್ನಲ್ಲಿ ಅತಿ ಹೆಚ್ಚು ಬೌಂಡರಿ- ಸಿಕ್ಸರ್ಗಳ ಸುರಿಮಳೆ ಕಂಡು ಬಂದಿರುವು ಚಿಕ್ಕ ಮೈದಾನ ಹೊಂದಿರುವ ಶಾರ್ಜಾ ಕ್ರೀಡಾಂಗಣದಲ್ಲಿ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 1 ವಿಕೆಟ್ ಪಡೆದಿರುವ ಯಜವೇಂದ್ರ ಚಹಾಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತೆಂದು ಇಂಗ್ಲೆಂಡ್ ಹಾಗೂ ರಾಜಸ್ಥಾನ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 194 ರನ್ಗಳಿಸಿತ್ತು. ಆರ್ಸಿಬಿಯ ಎಬಿ ಡಿ ವಿಲಿಯರ್ಸ್ 33 ಎಸೆತಗಳಲ್ಲಿ 73 ರನ್ ಸಿಡಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಆದರೆ ಸ್ಟೋಕ್ಸ್, ಬ್ಯಾಟಿಂಗ್ಗಾಗಿ ನಿರ್ಮಿಸಿದಂತಿರುವ ಶಾರ್ಜಾ ಕ್ರೀಡಾಂಗಣದಲ್ಲಿ ಕೇವಲ 12 ರನ್ಗಳನ್ನು ಮಾತ್ರ ನೀಡಿ 1 ವಿಕೆಟ್ ಪಡೆದ ಯಜುವೇಂದ್ರ ಚಹಾಲ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿಬೇಕಾಗಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
In a batters game @yuzi_chahal should get MOM here,incredible figures especially as it’s in Sharjah 👏
— Ben Stokes (@benstokes38) October 12, 2020 " class="align-text-top noRightClick twitterSection" data="
">In a batters game @yuzi_chahal should get MOM here,incredible figures especially as it’s in Sharjah 👏
— Ben Stokes (@benstokes38) October 12, 2020In a batters game @yuzi_chahal should get MOM here,incredible figures especially as it’s in Sharjah 👏
— Ben Stokes (@benstokes38) October 12, 2020
195 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ 112 ರನ್ಗಳನ್ನು ಮಾತ್ರ ದಾಖಲಿಸಿ 82 ರನ್ಗಳ ಸೋಲು ಕಂಡಿತು. ಚಹಾಲ್ 12 ರನ್ ನೀಡಿ 1ವಿಕೆಟ್ ಪಡೆದರೆ ವಾಷಿಂಗ್ಟನ್ ಸುಂದರ್ 20ಕ್ಕೆ 2 ಹಾಗೂ ಮೋರಿಸ್ 17ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಆಶ್ಚರ್ಯ ಎಂದರೆ ಈ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದಲ್ಲಿ ರಾಜಸ್ಥಾನ್ 216 ರನ್ ಗಳಿಸಿದ್ದರೆ, ಇದಕ್ಕುತ್ತರವಾಗಿ ಸಿಎಸ್ಕೆ 200 ರನ್ ಸಿಡಿಸಿತ್ತು. 2ನೇ ಪಂದ್ಯದಲ್ಲಿ ಪಂಜಾಬ್ 223 ರನ್ಗಳಿಸಿದ್ದರೆ, ಇದಕ್ಕುತ್ತರವಾಗಿ ರಾಜಸ್ಥಾನ್ 226 ರನ್ಗಳಿಸಿ ಗೆಲುವು ಸಾಧಿಸಿತ್ತು. 3ನೇ ಪಂದ್ಯದಲ್ಲಿ ಡೆಲ್ಲಿ 228 ಹಾಗೂ ಕೆಕೆಆರ್ 210 ರನ್ಗಳಿಸಿತ್ತು.
ಹೀಗೆ ಎಲ್ಲ ಪಂದ್ಯಗಳಲ್ಲೂ ಬ್ಯಾಟ್ಸ್ಮನ್ಗಳೇ ಪ್ರಾಬಲ್ಯ ಸಾಧಿಸಿದ್ದ ಕ್ರೀಡಾಂಗಣದಲ್ಲಿ ಆರ್ಸಿಬಿ ಬೌಲರ್ಗಳು ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳನ್ನೇ ಉಲ್ಟಾ ಮಾಡಿದರು.