ETV Bharat / sports

ಶ್ರೀನಿವಾಸನ್​ ಸೂಚಿಸಿದ ಆಟಗಾರ 'ತಂಡಕ್ಕೆ ಮಾರಕ', ನಮಗೆ ಆತ ಬೇಡ ಅಂದಿದ್ದರಂತೆ ಧೋನಿ!

ತಂಡದ ಒಳಿತಿಗಾಗಿ ನೇರವಾಗಿ ಮಾತನಾಡುವ ಧೋನಿ, ಒಮ್ಮೆ ಸಿಎಸ್​ಕೆ ಫ್ರಾಂಚೈಸಿ ಒಬ್ಬ ದೊಡ್ಡ ಆಟಗಾರರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದರಂತೆ. ಆದರೆ ಧೋನಿಗೆ ಆ ಆಟಗಾರ ಇಷ್ಟವಿಲ್ಲದ್ದರಿಂದ ಆ ಆಲೋಚನೆ ಕೈಬಿಡಲಾಗಿತ್ತು ಎಂದು ಸ್ವತಃ ಸಿಎಸ್​ಕೆ ಮಾಲೀಕ ಎನ್​ ಶ್ರೀನಿವಾಸನ್​ ಹೇಳಿದ್ದಾರೆ.

MS dhoni
ಎಂಎಸ್​ ಧೋನಿ
author img

By

Published : Aug 3, 2020, 7:06 PM IST

ಚೆನ್ನೈ: ಐಪಿಎಲ್​ ಇತಿಹಾಸದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ 8 ಬಾರಿ ಫೈನಲ್​ ಪ್ರವೇಶಿಸಿದೆ. 3 ಬಾರಿ ಚಾಂಪಿಯನ್​ ಪಟ್ಟ ಪಡೆದಿರುವ ಸಿಎಸ್​ಕೆ ತಂಡಕ್ಕೆ ಹಾಗೂ ಫ್ರಾಂಚೈಸಿ ಮಾಲೀಕರಿಗೆ ಧೋನಿ ಮಾತು ವೇದವಾಕ್ಯವಾಗಿತ್ತು ಎನ್ನುವುದಕ್ಕೆ ಶ್ರೀನಿವಾಸನ್​ ಘಟನೆಯೊಂದನ್ನು ಉದಾಹರಣೆಯಾಗಿ ಕೊಟ್ಟಿದ್ದಾರೆ.

ತಂಡದ ಒಳಿತಿಗಾಗಿ ನೇರವಾಗಿ ಮಾತನಾಡುವ ಧೋನಿ ಒಮ್ಮೆ ಸಿಎಸ್​ಕೆ ಫ್ರಾಂಚೈಸಿ ಒಬ್ಬ ದೊಡ್ಡ ಆಟಗಾರರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದರಂತೆ. ಆದರೆ ಧೋನಿಗೆ ಆ ಆಟಗಾರ ಇಷ್ಟವಿಲ್ಲದ್ದರಿಂದ ಆ ಆಲೋಚನೆ ಬಿಡಲಾಗಿತ್ತು ಎಂದು ಸ್ವತಃ ಸಿಎಸ್​ಕೆ ಮಾಲೀಕ ಎನ್​ ಶ್ರೀನಿವಾಸನ್​ ಹೇಳಿದ್ದಾರೆ.

"ನಾವು ಒಬ್ಬ ಅದ್ಭುತ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಧೋನಿಗೆ ಸಲಹೆ ನೀಡಿದ್ದೆವು. ಆದರೆ ಧೋನಿ, ಬೇಡಾ ಸರ್​, ಆತ ತಂಡವನ್ನು ಹಾಳು ಮಾಡುತ್ತಾನೆ'. ತಂಡದಲ್ಲಿ ಒಗ್ಗಟ್ಟು ಮುಖ್ಯವಾಗಿರುತ್ತದೆ. ಆದ್ದರಿಂದಲೇ ಅಮೆರಿಕದಲ್ಲಿ ಫ್ರಾಂಚೈಸಿ ಆಧಾರಿತ ಕ್ರೀಡೆಗಳು ಬಹಳ ಸಮಯದಿಂದ ಇವೆ" ಎಂದು ಧೋನಿ ಹೇಳಿದ ಮಾತನ್ನು ಪ್ರಮುಖ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶ್ರೀನಿವಾಸನ್​ ಬಿಚ್ಚಿಟ್ಟಿದ್ದಾರೆ. ಆದರೆ ಶ್ರೀನಿವಾಸನ್​ ಧೋನಿ ರಿಜೆಕ್ಟ್​ ಮಾಡಿದ ಆಟಗಾರನ ಹೆಸರನ್ನು ಬಹಿರಂಗಗೊಳಿಸಿಲ್ಲ.

ಧೋನಿ 2008ರಲ್ಲಿ ಸಿಎಸ್​ಕೆ ತಂಡಕ್ಕೆ ಸೇರ್ಪಡೆಗೊಂಡಿದ್ದರು. ನಿಷೇಧಗೊಂಡಿದ್ದ 2 ಆವೃತ್ತಿ ಬಿಟ್ಟರೆ ಧೋನಿ ಎಲ್ಲಾ ಆವೃತ್ತಿಗಳಲ್ಲೂ ಸಿಎಸ್​ಕೆ ತಂಡವನ್ನು ಮುನ್ನಡೆಸಿದ್ದಾರೆ. ಧೋನಿ ನಾಯಕತ್ವಲ್ಲಿ ಸಿಎಸ್​ಕೆ 2010, 2011, 2018ರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. 2008, 2012, 2013, 2015 ಹಾಗೂ 2019ರಲ್ಲಿ ರನ್ನರ್​ ಅಪ್​ ಸ್ಥಾನ ಒಡೆದಿದೆ. 10 ಆವೃತ್ತಿಗಳನ್ನು ಪ್ಲೇ ಆಫ್​ ತಲುಪಿರುವುದು ಧೋನಿ ನಾಯಕತ್ವದ ಹೆಗ್ಗಳಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.